ಮಂಗಳೂರಿನ ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್-ಸ್ವಾತಿ ರಾವ್ ಮತ್ತು ಬಳಗದವರು ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರು ಕಡಲ ಕಿನಾರೆಯಲ್ಲಿ ನಡೆದ ಉದಯರಾಗದಲ್ಲಿ ಸಂಗೀತ ಪ್ರತಿಭೆಯನ್ನು ಪ್ರಸ್ತುತಪಡಿಸಿದರು.ಅದೇ ದಿನ ಸಂಧ್ಯಾ ಕಾಲದಲಿ ಕರಾವಳಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲೂ ಇವರು ಸಂಗೀತದ ಸುಧೆಯನ್ನು ಹರಿಸಿದರು.
ಪ್ರಣಮ್ಯ ಶಿರಸಾ ದೇವಂ ಎಂಬ ವಿಘ್ನೇಶ್ವರ ದೇವರ ಸ್ತುತಿ ಹಾಗೂ ಇತರ ಭಕ್ತಿಗೀತೆಗಳೊಂದಿಗೆ ಅನುಶ್ರೀಯವರ ಕಂಠಸಿರಿಯಲ್ಲಿ ಆರಂಭಗೊಂಡಿತು.ಮುಂದೆ ದೇಶ್ ಕುಲಕರ್ಣಿಯವರ ಸಾಹಿತ್ಯದ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು,
ಡಾ| ಎನ್.ಎಸ್.ಎಲ್ರವರ ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ ಹಾಡುಗಳು ಸುಶ್ರಾವ್ಯವಾಗಿ ಹರಿದು ಬಂದಿತ್ತಲ್ಲದೆ, ಹಾಡಿಗೆ ಭಾವನೆಗಳ ಸ್ಪರ್ಶ ನೀಡಿ ಸಂಗೀತ ರಸಿಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಸ್ವಾತಿರಾವ್ ಕೆಲ ಜನಪದ ಗೀತೆಗಳನ್ನು ಮೂಲ ಗಾಯಕರ ಶೈಲಿಯಲ್ಲೇ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾದರಲ್ಲದೆ,ಹಲವು ಹಾಡುಗಳನ್ನು ಸೋದರಿಯರು ಜೊತೆಯಾಗಿ ಪ್ರಸ್ತುತಪಡಿಸಿದರು. ಶ್ರಾವಣದ ಹೂಬನ ಇಂದು ಸಮ್ಮೊàಹನ ಹಾಡಿನ ಮೂಲಕ ಸಮ್ಮೊàಹನಗೊಳಿಸುವಲ್ಲಿ ಯಶಸ್ವಿಯಾದರು.
ಹೆಚ್.ಎಸ್.ವಿಯವರ ಅಮ್ಮ ನಾನು ದೇವರಾಣೆ ಹಾಡನ್ನು ಪ್ರಸ್ತುತಪಡಿಸಿದ ರೀತಿ ಮೆಚ್ಚುವಂತಿತ್ತು.ತುಳುನಾಡಿನ ಜೀವನ, ಕಲೆ, ಸಂಸ್ಕೃತಿಯ ಸಾಹಿತ್ಯವಿರುವ ತೂಲೆ ನಿಕುಲೋರ ತುಳುವಪ್ಪೆನ ಜಿಂಜಿನೈಸಿರಿ ಪೊರ್ಲು ಹಾಡು ಮೆರುಗು ಪಡೆಯಿತು.ಕೆಲವು ಹಾಡುಗಳನ್ನು ಎಳೆಯ ಪುಟಾಣಿಗಳಿಂದ ಹಿಡಿದು ಎಲ್ಲಾ ವಯೋಮಾನವರನ್ನೊಳಗೊಂಡ ತಂಡದ ಸದಸ್ಯರು ಸಮೂಹ ಗಾಯನದಲ್ಲಿ ಪ್ರಸ್ತುತಪಡಿಸಿ ಉಲ್ಲಸಿತಗೊಳಿಸಿದರು.ಶ್ರೀಕಾಂತ್ ನಾಯಕ್(ತಬಲಾ),ಅಮ್ಮು ಹಾಗೂ ಧೀರಜ್ ರಾವ್(ಕೀಬೋರ್ಡ್)ಉದಯ… ಕುಮಾರ್ (ರಿದಮ… ಪ್ಯಾಡ್) ಸಹಕರಿಸಿದರು.
ಶ್ರವಣ್ ಶೆಟ್ಟಿ