Advertisement

ಶಾಲಾವರಣ ಸ್ವಚ್ಛತೆಗೆ ಪುರಸಭೆಗಿಲ್ಲ ಪುರುಸೊತ್ತು

11:44 AM Sep 15, 2019 | Team Udayavani |

ಬಂಕಾಪುರ: ರಾಯಚೂರ ಗಲ್ಲಿಯಲ್ಲಿನ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಳಚೆ ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಪರಿಣಾಮ ಮಕ್ಕಳಲ್ಲಿ ಅನಾರೋಗ್ಯ ಭೀತಿ ಕಾಡುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರಸ್ತುತ ಇಡೀ ದೇಶವೇ ಸ್ವಚ್ಛತೆ ಮಂತ್ರ ಪಠಿಸುತ್ತಿದ್ದರೆ ಸ್ಥಳೀಯ ಆಡಳಿತ ಮಾತ್ರ ಸ್ವಚ್ಛತೆ ಮರೆತಿದ್ದು, ಪಟ್ಟಣದ ವಿವಿಧ ಬಡಾವಣೆ ಸೇರಿದಂತೆ ಸರಕಾರಿ ಕಿರಿಯ ಉರ್ದು ಪಾಥಮಿಕ ಶಾಲೆ ಆವರಣದಲ್ಲಿ ಕಸ, ಕಡ್ಡಿ, ಗಿಡ ಗಂಟಿಗಳಿಂದ ತುಂಬಿ ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ಮಕ್ಕಳನ್ನು ಬಯದ ವಾತಾವರಣದಲ್ಲಿ ಶಾಲೆಗೆ ಕಳುಹಿಸುವಂತಾಗಿದೆ. ಈ ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಿಸದ ಪರಿಣಾಮ ಬೀದಿನಾಯಿ, ಹಂದಿ ಸೇರಿದಂತೆ ಜಾನುವಾರುಗಳು ಎಲ್ಲೆಂದರಲ್ಲಿ ನುಗ್ಗಿ ಬರುತ್ತವೆ. ಉರ್ದು ಶಾಲೆ ಎದುರಿಗೆ ಅಂಗನವಾಡಿಯೂ ಇದ್ದು, ಸಣ್ಣ ಮಕ್ಕಳ ಮೇಲೆ ಯಾವಾಗ ಪ್ರಾಣಿಗಳು ದಾಳಿ ಮಾಡುವವೋ ಎಂಬ ಭಯದಲ್ಲಿಯೇ ಪಾಲಕರು ದಿನ ಕಳೆಯುವಂತಾಗಿದೆ.

ಶಾಲೆಯ ಅಕ್ಕ ಪಕ್ಕ, ಖಾಸಗಿಯವರಿಗೆ ಸೇರಿದ ಜಾಗೆಯಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಲು ಸಂಬಂಧಿಸಿದ ಜಾಗೆಯ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗುವುದು. ಕೂಡಲೇ ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.•ರೂಪಾ ನಾಯ್ಕರ, ಪುರಸಭೆ ಆರೋಗ್ಯ ನಿರೀಕ್ಷಕಿ

ಇಗಾಗಲೇ ಹಲವು ಬಾರಿ ಪುರಸಭೆಗೆ ಶಾಲಾ ಆವರಣದಲ್ಲಿ ನಿಂತರಿರುವ ಕೊಳಚೆ ನೀರು ಸ್ವಚ್ಛಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈ ವರೆಗೂ ಸ್ಪಂದನೆ ಸಿಕ್ಕಿಲ್ಲ.•ಎಂ.ಎ.ಹುಬ್ಬಳ್ಳಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next