ಒದಗಿಸಲು ನಗರಸಭೆ ಆಡಳಿತ ಮಂಡಳಿ, ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಆನಂದ್ ಸಿಂಗ್, ದಿಢೀರ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರ ಕಳುಹಿಸಿದ ಘಟನೆ ಶುಕ್ರವಾರ ನಡೆಯಿತು.
Advertisement
ಶಾಸಕರು ಹೇಳುತ್ತಿದಂತಯೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಒಬೊಬ್ಬರಾಗಿ ಕಚೇರಿಯಿಂದ ಹೊರ ನಡೆದರು. ಕೆಲ ಸದಸ್ಯರು, ಶಾಸಕರನ್ನು ಹಿಂಬಾಲಿಸಿದರೆ, ಕೆಲ ಸದಸ್ಯರು ಕಚೇರಿಯಲ್ಲಿ ಉಳಿದರು. ಕೆಲವರು ಹೊರ ಬಾರದಿದಕ್ಕೆ ಕುಪಿತಗೊಂಡ ಶಾಸಕರು, ಸಾರ್ವಜನಿಕರು, ನಗರಸಭೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.
ಪೂರ್ಣಗೊಂಡಿಲ್ಲ. ಇದಕ್ಕಾಗಿ ರಸ್ತೆಯನ್ನೆಲ್ಲ ಅಗೆದು, ಹಾಳು ಮಾಡಲಾಗಿದ್ದು, ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಾಟ್ಟಿವೆ. ನಗರದಲ್ಲಿ ಡೆಂಘೀ ಎಂತಹ ಮಾರಕ ಕಾಯಿಲೆಗಳು ಜನರು ತಮ್ಮ ಪ್ರಾಣಗಳನ್ನು ಕಳೆದು ಕೊಳ್ಳುವಂತಾಗಿದೆ. ಎಲ್ಲದಕ್ಕೂ ಅಧಿಕಾರಿಗಳು ಸಬೂಬು ಹೇಳುವುದನ್ನೇ ಮೈಗೂಡಿಸಿಕೊಂಡಿದ್ದಾರೆ. ಕೆಲಸ ಮಾತ್ರ ಶೂನ್ಯ ಎಂದು ತರಾಟೆ ತೆಗೆದುಕೊಂಡರು. ನಗರದಲ್ಲಿ ಉಲ್ಬಣಗೊಂಡಿರುವ ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗ-ರುಜಿನಗಳಿಗೆ ಹತೋಟಿಗೆ ಬಾರದೆ ನಾಗರಿಕರು ಪರದಾಡುವಂತಾಗಿದೆ. ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
Related Articles
Advertisement
ಸ್ವಾರ್ಥ ರಾಜಕೀಯ ಸಲ್ಲ: ಕೊಟ್ರೇಶ್ ತಾತ್ವಿಕ ಮತ್ತು ಸೈದ್ಧಾಂತಿಕ ನಿಲುವು ಇಲ್ಲದವರಿಗೆ ಸಾಮಾಜಿಕ ಜವಾಬ್ದಾರಿಗಳು ಬರೋಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಪಕ್ಷದವರನ್ನು ರಾಜಕೀಯವಾಗಿ ಬಲಹೀನಗೊಳಿಸುವುದು ಕೂಡ ಭ್ರಷ್ಟಾಚಾರ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಜನರು ಶಾಸಕರನ್ನು ಆಯ್ಕೆ ಮಾಡಿ ಕಳಿಸಿದರೆ ಸುಮಾರು ನಾಲ್ಕು ವರ್ಷಗಳಲ್ಲಿ ಶಾಸಕ ಆನಂದಸಿಂಗ್ ಕನಿಷ್ಠ 60 ದಿನಗಳಷ್ಟು ಸಹ ಹಾಜರಾಗಿಲ್ಲ. ಇನ್ನೂ ಅಭಿವೃದ್ಧಿ ಹೇಗೆ ತಾನೆ ಆಗುತ್ತದೆ. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ನಗರಸಭೆ ಆಡಳಿತ ಯಂತ್ರವನ್ನು ಕುಂಠಿತಗೊಳಿಸಿದ್ದಾರೆ. ಕಾಂಗ್ರೆಸ್‌ನಿಂದ ಚುನಾಯಿತ ಸದಸ್ಯರನ್ನು ಪ್ರಭಾವ ಬಳಸಿ ಸೆಳೆದು ಬಲಹೀನಗೊಳಿಸುತ್ತಿದ್ದಾರೆ. ಶಾಸಕರು ಶಾಸನ ಸಭೆಯಲ್ಲಿ ಧ್ವನಿ ಎತ್ತಬೇಕು. ನಗರಸಭೆಯಲ್ಲಿ ಮೇಲಿಂದ ಮೇಲೆ ಆಗಮಿಸಿ ಆಡಳಿತದಲ್ಲಿ ಮೂಗು ತೂರಿಸುವುದು ಅವರಿಗೆ ಶೋಭ ತರುವಂಥದ್ದಲ್ಲ. ನಗರಸಭೆ ಮೇಲೆ ಹಿಡಿತ ಸಾಧಿಸಬೇಕೆಂದಿದ್ದರೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಆಡಳಿತ ನಡೆಸಿ, ಅಭಿವೃದ್ಧಿಗೊಳಿಸಲು ಅವಕಾಶವಿದೆ. ಶಾಸಕರ ಅವಧಿಯುದ್ದಕ್ಕೂ ನಗರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲವೆಂಬುದನ್ನು ಅವರೇ ಪ್ರತಿಭಟನೆ ಮೂಲಕ ಹೊರಹಾಕಿದ್ದಾರೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಕೊಟ್ರೇಶ್ ಆರೋಪಿಸಿದ್ದಾರೆ.