Advertisement

ಇಂದಿಗೂ ಕಾಡುತ್ತಿದೆ ಮುಂಬಯಿ ದಾಳಿ

09:56 AM Oct 01, 2019 | Team Udayavani |

ಐಎನ್‌ಎಸ್‌ ವಿಕ್ರಮಾದಿತ್ಯ (ಪಶ್ಚಿಮ ಕರಾವಳಿ): 2008ರಲ್ಲಿ ನಡೆದಿದ್ದ ಮುಂಬಯಿ ದಾಳಿಯ ಕರಾಳ ನೆನಪು ಈಗಲೂ ದೇಶವನ್ನು ಕಾಡುತ್ತಿದೆ ಎಂದಿ ದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌. ಐಎನ್‌ಎಸ್‌ ವಿಕ್ರಮಾದಿತ್ಯ ಜಲಾಂತರ್ಗಾಮಿಯಲ್ಲಿ ಶನಿವಾರ ರಾತ್ರಿ ತಂಗಿದ್ದ ಅವರು, ರವಿವಾರ ಅದರಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ದಲ್ಲಿಯೇ ಪತ್ರಕರ್ತರೊಂದಿಗೆ ಮಾತನಾಡಿದರು.

Advertisement

ಸಣ್ಣ ನಿರ್ಲಕ್ಷ್ಯದಿಂದ ಆದ ಅತಿದೊಡ್ಡ ಪ್ರಮಾದ ಮುಂಬಯಿ ದಾಳಿ. ಅಂಥ ನಿರ್ಲಕ್ಷ್ಯಗಳನ್ನು ಮತ್ತೆ ಮಾಡುವ ಹಾಗಿಲ್ಲ. ಹೀಗಾಗಿ ನೌಕಾಪಡೆ, ಹಗಲಿ ರುಳೆನ್ನದೆ ಕರಾವಳಿ ತೀರವನ್ನು ಕಟ್ಟೆಚ್ಚರ ದಿಂದ ಕಾಯುತ್ತಿದೆ’ ಎಂದಿದ್ದಾರೆ ರಾಜನಾಥ್‌ ಸಿಂಗ್‌.

ಪಾಕಿಸ್ಥಾನವನ್ನು ಪರೋಕ್ಷವಾಗಿ ಪ್ರಸ್ತಾ ಪಿಸಿದ ಅವರು, “ನಮ್ಮ ನೆರೆಯ ದೇಶವೊಂದು ಭಾರತವನ್ನು ಘಾಸಿಗೊಳಿ ಸಲು, ಒಡೆಯಲು ಹೊಂಚು ಹಾಕು ತ್ತಲೇ ಇದೆ. ಆದರೆ, ಆ ದೇಶದ ಪ್ರತಿಯೊಂದು ದಾಳಿಯನ್ನು ಸಮರ್ಥ ವಾಗಿ ಎದುರಿಸುವ ಶಕ್ತಿ ಭಾರತಕ್ಕಿದೆ. ಸಾಗರದ ಮೂಲಕ ಆಗುವ ದಾಳಿಗಳನ್ನು ಹಿಮ್ಮೆಟ್ಟಿಸಲು ಭಾರತೀಯ ನೌಕಾಪಡೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ” ಎಂದರು.

ಇದೇ ವೇಳೆ, ಬಾಲಾಕೋಟ್‌ನಲ್ಲಿ ಮತ್ತೆ ಉಗ್ರರ ತರಬೇತಿ ಶಿಬಿರ ತಲೆ ಎತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಇತ್ತೀಚೆಗೆ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್‌, “”ಮತ್ತೆ ತಲೆಯೆತ್ತುವ ಉಗ್ರವಾದಿಗಳಿಗೆ ಎಂಥಾ ಶಾಸ್ತಿಯಾಗುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next