Advertisement
ಈ ಬಾರಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ರಚಿನ್ ರವೀಂದ್ರ ಸೇರಿ ಹಲವರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಈ ಆಟಗಾರರು ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು.
Related Articles
Advertisement
2009: ಆ್ಯಂಡ್ರ್ಯೂ ಪ್ಲಿಂಟಾಫ್ ಮತ್ತು ಕೆವಿನ್ ಪೀಟರ್ಸನ್
ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಅವರನ್ನು 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9.80 ಕೋಟಿ ರೂ ಗೆ ಖರೀದಿ ಮಾಡಿತ್ತು. ಅದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲಿಂಟಾಫ್ ರನ್ನು 9.80 ಕೋಟಿ ರೂ ಗೆ ಖರೀದಿಸಿತ್ತು.
2010: ಶೇನ್ ಬಾಂಡ್ ಮತ್ತು ಕೈರನ್ ಪೊಲಾರ್ಡ್
ಕೆಕೆಆರ್ ತಂಡವು 2010ರಲ್ಲಿ ಕಿವೀಸ್ ವೇಗಿ ಶೇನ್ ಬಾಂಡ್ ಅವರನ್ನು 4.80 ಕೋಟಿ ರೂ ಖರೀದಿ ಮಾಡಿತ್ತು. ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡವು ಕೈರನ್ ಪೊಲಾರ್ಡ್ ಅವರನ್ನು ಅದೇ ಮೊತ್ತಕ್ಕೆ ಖರೀದಿ ಮಾಡಿತ್ತು.
2011: ಗೌತಮ್ ಗಂಭೀರ್
2011ರಲ್ಲಿ ಕೆಕೆಆರ್ ತಂಡವು ಗೌತಮ್ ಗಂಭೀರ್ ಅವರನ್ನು 14.90 ಕೋಟಿ ರೂ ನೀಡಿ ಖರೀದಿಸಿತ್ತು. ಗಂಭೀರ್ ಆ ವೇಳೆ ದುಬಾರಿ ಆಟಗಾರನಾಗಿದ್ದರು.
2012; ರವೀಂದ್ರ ಜಡೇಜಾ
ಚೆನ್ನೈ ಸೂಪರ್ ಕಿಂಗ್ಸ್ ತಂಡವು 12.80 ಕೋಟಿ ರೂ ನೀಡಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಖರೀದಿಸಿತ್ತು.
2023: ಗ್ಲೆನ್ ಮ್ಯಾಕ್ಸವೆಲ್
ಹಾರ್ಡ್ ಹಿಟ್ಟಿಂಗ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 6.30 ಕೋಟಿ ರೂ ನೀಡಿ ಖರೀದಿಸಿತ್ತು. ಮೂರು ಪಂದ್ಯಗಳನ್ನು ಆಡಿದ್ದ ಮ್ಯಾಕ್ಸವೆಲ್ 36 ರನ್ ಗಳಿಸಿದ್ದರು.
2014; ಯುವರಾಜ್ ಸಿಂಗ್
2014ರ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 14 ಕೋಟಿ ರೂ ನೀಡಿತ್ತು.
2015: ಯುವರಾಜ್ ಸಿಂಗ್
ಮುಂದಿನ ವರ್ಷವೂ ಅಂದರೆ 2015ರಲ್ಲಿಯೂ ಯುವರಾಜ್ ಸಿಂಗ್ ಅವರೇ ಅತಿ ಹೆಚ್ಚು ಹಣ ಪಡೆದ ಆಟಗಾರನಾಗಿದ್ದರು. ಯುವಿ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡವು 16 ಕೋಟಿ ರೂ ನೀಡಿ ಖರೀದಿಸಿತ್ತು.
2016: ಶೇನ್ ವಾಟ್ಸನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರನ್ನು 9.50 ಕೋಟಿ ರೂ ಗೆ ಖರೀದಿಸಿತ್ತು.
2017: ಬೆನ್ ಸ್ಟೋಕ್ಸ್
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು 2017ರಲ್ಲಿ ಬೆನ್ ಸ್ಟೋಕ್ಸ್ ಅವರನ್ನು 14.50 ಕೋಟಿ ರೂ ನೀಡಿ ಖರೀದಿಸಿತ್ತು.
2018: ಬೆನ್ ಸ್ಟೋಕ್ಸ್
ಎರಡು ವರ್ಷಗಳ ಬ್ಯಾನ್ ಬಳಿಕ ಬಂದ ರಾಜಸ್ಥಾನ ರಾಯಲ್ಸ್ ತಂಡವು ಬೆನ್ ಸ್ಟೋಕ್ಸ್ ಅವರನ್ನು 14.50 ಕೋಟಿ ರೂ ಗೆ ಖರೀದಿ ಮಾಡಿತ್ತು.
2019: ಜಯದೇವ್ ಉನಾದ್ಕತ್ & ವರುಣ್ ಚಕ್ರವರ್ತಿ
ಎಡಗೈ ವೇಗಿ ಜಯದೇವ್ ಉನಾದ್ಕತ್ ಅವರನ್ನು ರಾಜಸ್ಥಾನ ರಾಯಲ್ಸ್ 8.40 ಕೋಟಿ ರೂ ಗೆ ಖರೀದಿ ಮಾಡಿತ್ತು. ಅದೇ ಸೀಸನ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಅಷ್ಟೇ ಹಣ ನೀಡಿತ್ತು.
2020 ಪ್ಯಾಟ್ ಕಮಿನ್ಸ್
ಆಸೀಸ್ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ತಂಡವು ಬರೋಬ್ಬರಿ 15.50 ಕೋಟಿ ರೂ ನೀಡಿತ್ತು. ಅವರು ಮೂರು ಸೀಸನ್ ಕೆಕೆಆರ್ ಪರ ಆಡಿದ್ದಾರೆ.
2021: ಕ್ರಿಸ್ ಮೊರಿಸ್
ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಕ್ರಿಸ್ ಮೊರಿಸ್ ಅವರನ್ನು ರಾಜಸ್ಥಾನ ತಂಡವು 16.50 ಕೋಟಿ ರೂ ನೀಡಿ ಖರೀದಿಸಿತ್ತು.
2022 ಇಶಾನ್ ಕಿಶನ್
ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 15.25 ಕೋಟಿ ರೂ ನೀಡಿ ತಂಡಕ್ಕೆ ಖರೀದಿಸಿತ್ತು.
2023: ಸ್ಯಾಮ್ ಕರ್ರನ್
ಇಂಗ್ಲೆಂಡ್ ಅಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು.