Advertisement

ಸೊಳ್ಳೆಗಳ ಎಂಜಲಿನಿಂದ ಸಿದ್ಧಗೊಳ್ಳಲಿದೆ ಸರ್ವ ರೋಗಕ್ಕೆ ಲಸಿಕೆ

08:52 AM Jun 13, 2020 | mahesh |

ಹೊಸದಿಲ್ಲಿ: ಅಮೆರಿಕದ ಸಂಶೋಧಕಿಯಾದ ಜೆಸ್ಸಿಕಾ ಮ್ಯಾನಿಂಗ್‌ ಸೊಳ್ಳೆಗಳ ಎಂಜಲಿನಿಂದ ಲಸಿಕೆಯೊಂದನ್ನು ಸಿದ್ಧಗೊಳಿಸುವಲ್ಲಿ ಯಶಸ್ಸಿನ ಹೆಜ್ಜೆಗಳನ್ನಿಡುತ್ತಿದ್ದಾರೆ! ಸೊಳ್ಳೆಗಳ ಎಂಜಲಿನಲ್ಲಿರುವ ಪ್ರೋಟೀನ್‌ ಕಣಗಳನ್ನು ಬಳಸಿಕೊಂಡು ಸರ್ವ ಸೋಂಕುಗಳಿಗೂ ಮದ್ದು ಎಂಬಂಥ ಲಸಿಕೆಯನ್ನು ತಯಾರಿಸುವ ಆಲೋಚನೆ 5 ವರ್ಷದ ಹಿಂದೆ ಹೊಳೆದಿತ್ತು. ಕೊಲಂಬಿಯಾದ ವಾಯುವ್ಯ ದಿಕ್ಕಿನಲ್ಲಿರುವ ಫೋಮ್‌ ಫೆನ್ಹ್ ಎಂಬಲ್ಲಿರುವ ದೊಡ್ಡದೊಂದು ಸೊಳ್ಳೆಯ ಪ್ರತಿಕೃತಿಯನ್ನು ನೋಡುತ್ತಾ ಕುಳಿತಿದ್ದ ಅವರಿಗೆ ಆಲೋಚನೆ ಬಂದಿತ್ತು. ಅದನ್ನು ಯುಎಸ್‌ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಅಲರ್ಜಿ ಆ್ಯಂಡ್‌ ಇನ್ಫ ಕ್ಷಿಯಸ್‌ ಡಿಸೀಸಸ್‌ನಲ್ಲಿ ಚರ್ಚೆಗೊಳಪಡಿಸಿದರು. ಈಗ, ಪ್ರಯೋಗಗಳ ಮೂಲಕ ಕಲ್ಪನೆಯನ್ನು ಸಾಕಾರಗೊ ಳಿಸುವಲ್ಲಿ ನಿರತರಾಗಿದ್ದಾರೆ.

Advertisement

ಪ್ರಯೋಜನವೇನು?: ಲಸಿಕೆ ಎಲ್ಲಾ ರೀತಿಯ ಪ್ರಯೋಗಗಳನ್ನು ಪಾಸಾಗಿ ಹೊರಬಂದ ನಂತರ, ಅದು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘಿ, ಚಿಕುನ್‌ಗುನ್ಯಾ, ಹಳದಿ ಜ್ವರ, ವೆಸ್ಟ್‌ ನೈಲ್‌ ಮುಂತಾದವನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next