Advertisement

ಅತ್ಯಾಧುನಿಕ ಹೊಸಎಕ್ಸ್‌ರೇ ಕಾರ್ಯಾರಂಭ

11:31 AM Aug 05, 2018 | |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಕಂಪ್ಯೂಟರ್‌ ಎಕ್ಸ್‌ರೇ ಯಂತ್ರ ಬಂದಿದ್ದರೂ ಫಿಲ್ಮ್ ಶೀಟ್‌ ಇಲ್ಲದೆ ಹಳೆ ಮೆಷಿನ್‌ನಲ್ಲೇ ಎಕ್ಸ್‌ರೇ ಮಾಡಲಾ ಗುತ್ತಿತ್ತು. ಆದರೆ ಇದೀಗ ಫಿಲ್ಮ್ ಶೀಟ್‌ ಆಸ್ಪತ್ರೆಗೆ ಬಂದಿದ್ದು, ಶನಿವಾರದಿಂದ ಹೊಸ ಮೆಷಿನ್‌ನಲ್ಲಿ ಎಕ್ಸ್‌ರೇ ಆರಂಭಗೊಂಡಿದೆ.

Advertisement

ಹಳೆ ಮೆಷಿನ್‌ನಲ್ಲೇ ಎಕ್ಸ್‌ರೇ ಮಾಡಲಾಗುತ್ತಿದೆ ಎಂಬ ರೋಗಿಗಳ ದೂರಿನ ಕುರಿತು ಜು. 23ರ ಉದಯವಾಣಿ ಸುದಿನದಲ್ಲಿ `ಫಿಲ್ಮ್ ಶೀಟ್‌ ನೆಪ: ಹೊಸತಿದ್ದರೂ ಇನ್ನೂ ಹಳೆ ಯಂತ್ರದಲ್ಲೇ ಎಕ್ಸ್‌ರೇ’ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಜತೆಗೆ ಶಾಸಕ ಹರೀಶ್‌ ಪೂಂಜ ಅವರು ಈ ವಿಚಾರದಲ್ಲಿ ಕೆಡಿಪಿ ಸಭೆಯಲ್ಲೂ ತಾಲೂಕು ವೈದ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹಳೆ ಮೆಷಿನ್‌ನಲ್ಲಿ ಎಕ್ಸ್‌ರೇ ತೆಗೆಯುವುದು ವಿಳಂಬವಾಗುವ ಜತೆಗೆ ಎಕ್ಸ್‌ರೇ ಶೀಟಿನ ಗುಣಮಟ್ಟವೂ ಉತ್ತಮವಾಗಿರಲಿಲ್ಲ. . ಜತೆಗೆ ರೋಗಿಗಳು  ಎಕ್ಸ್‌ರೇಗೆ ಕಾದು, ವೈದ್ಯರೂ ಸಿಗದಂತಾಗುತಿತ್ತು. ಈ ಕುರಿತು ರೋಗಿಗಳು ಶಾಸಕರು ಸೇರಿದಂತೆ ಸಂಬಂಧ ಪಟ್ಟವರಿಗೆ ದೂರು ನೀಡಿದ್ದರು. ಹೀಗಾಗಿ ಶಾಸಕರು ವೈದ್ಯಾಧಿಕಾರಿ ಅವರನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದರು.

ಆಸ್ಪತ್ರೆಯ ವೈದ್ಯಾಧಿಕಾರಿಯವರು ಹೊಸ ಮೆಷಿನ್‌ನ ಫಿಲ್ಮ್ ಶೀಟ್‌ಗೆ ಅನುದಾನ ಹೆಚ್ಚು ಬೇಕಾಗುತ್ತದೆ ಎಂಬ ನೆಪವೊಡ್ಡಿ ಹಳೆ ಮೆಷಿನನ್ನೇ ಉಪಯೋಗಿಸುವಂತೆ ಸೂಚಿಸಿದ್ದರು. ಆದರೆ ಶನಿವಾರ ಹೊಸ ಮೆಷಿನ್‌ನ ಫಿಲ್ಮ್ ಶೀಟ್‌ ಬಂದಿದ್ದು, ಇನ್ನು ಮೂರು ತಿಂಗಳು ಹೊಸ ಮೆಷಿನ್‌ನಲ್ಲೇ ಎಕ್ಸ್‌ರೇ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next