Advertisement
ಅನುದಾನಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಸುಳ್ಳು ಹೇಳಿಲ್ಲ. ಬ್ಯಾನರ್, ಫ್ಲೆಕÕ… ಹಾಕಿಕೊಂಡು ಪ್ರಚಾರ ಮಾಡಿಕೊಂಡಿಲ್ಲ. ಭ್ರಷ್ಟಾಚಾರ ನಡೆಸಿಲ್ಲ, ಭ್ರಷ್ಟಾಚಾರಿಗಳನ್ನೂ ಪೋಷಿಸಿಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಲೇವಡಿ ಮಾಡಿದರು.
ಹಲವಾರು ಪ್ರಥಮಗಳ ಯೋಜನೆ ಗಳನ್ನು ಪರಿಚಯಿಸಿದ್ದು, ರಾಜ್ಯ ವಲಯ
ದಲ್ಲಿಯೇ ವಿಶೇಷವಾಗಿ ಶ್ಲಾಘನೆಗೆ ಒಳಪಟ್ಟಿದೆ. ಸಂಸತ್‌ನಲ್ಲಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ಲೇಷಣೆಯೊಂದರಲ್ಲಿ 53 ಮಹಿಳಾ ಸಂಸದರ ಪೈಕಿ ಪ್ರಪ್ರಥಮ ಸಾಧಕರಾಗಿ ಅವರು ನಿಲ್ಲುತ್ತಾರೆ. ಅವರು
ಇದನ್ನು ಎಲ್ಲೂ ಪ್ರಚಾರ ಮಾಡಿಲ್ಲ. ಅವರ ಸಾಧನೆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಪ್ರಮೋದ್ ಅವರಿ ಗಿಲ್ಲ ಎಂದು ಹೇಳಿದರು.
Related Articles
ಪ್ರಮೋದ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿ ಸೋತೆನೆಂದು ಮತ್ತೆ ಕಾರ್ಯಕರ್ತರನ್ನು ಓಲೈಸಲು ಆರಂಭಿಸಿ¨ªಾರೆ. ಅಂದು ಸೋತಾಗ ಉÇÉೇಖವಾಗದ ಕಾರ್ಯಕರ್ತರ ಮೇಲಿನ ಪ್ರೇಮ ಇದ್ದಕ್ಕಿದ್ದಂತೆ ಅವರಿಗೆ ಈಗ ಏಕೆ ಉಕ್ಕಿ ಹರಿಯುತ್ತಿದೆ ಎಂದು ಪ್ರಭಾಕರ ಪೂಜಾರಿ ಪ್ರಶ್ನಿಸಿದರು.
Advertisement
ಬಿಜೆಪಿ ಬಾಗಿಲಲ್ಲಿ ನಿಂತವರುಅಧಿಕಾರದಾಹದಿಂದ ಯಾವುದೇ ಪಕ್ಷವಾದರೂ ಸರಿಯೇ ಎನ್ನುವ ಮನೋಭಾವ ಹೊಂದಿರುವ ಪ್ರಮೋದ್ ಅಂತಿಮ ಕ್ಷಣದವರೆಗೂ ಬಿಜೆಪಿ ಬಾಗಿಲಲ್ಲಿ ನಿಂತು, ಅಲ್ಲಿ ಪ್ರವೇಶ ದೊರಕದಿ¨ªಾಗ ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಸೇರಿ ಈಗ ಎರಡೂ ಪಕ್ಷವನ್ನು ನಿರ್ನಾಮಗೊಳಿಸಲು ಪೀಠಿಕೆ ಹಾಕಿ¨ªಾರೆ ಎಂದರು. ಪಂ.ಗಳಿಗೆ ಹೇರಳ ಅನುದಾನ
ಶೋಭಾ ಕರಂದ್ಲಾಜೆಯವರು ಸಂಸದೆಯಾಗಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳಿಗೆ ಹೇರಳ ಅನುದಾನಗಳನ್ನು ತಂದಿದ್ದು, ಈ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಸಂಸದರ ನಿಧಿ ಬಳಕೆಯಾಗಿದೆ. ಯಾವುದೇ ಪಂ. ಸದಸ್ಯನ ಅರ್ಜಿ ತಿರಸ್ಕೃತಗೊಂಡ ದಾಖಲೆಗಳಿಲ್ಲ. ಇದು ಸಂಸದೆಯವರ ಕಾರ್ಯತತ್ಪರತೆ, ಜನಪರ ಕಾಳಜಿಯನ್ನು ಸೂಚಿಸುತ್ತದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು. ನಗರ ಬಿಜೆಪಿ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಉಪಾಧ್ಯಕ್ಷ ಟಿ.ಜಿ. ಹೆಗ್ಡೆ, ಸತೀಶ್ ಶೆಟ್ಟಿ, ನಗರಸಭಾ ಸದಸ್ಯ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.