Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ಪಕ್ಷಕ್ಕೆ ಬಹುಮತ ಬಾರದೆ ಇದ್ದಾಗ ಎಲ್ಲ ಪಕ್ಷಗಳೂ ಸೇರಿ ಸರಕಾರ ರಚಿಸಬಹುದು ಎಂದು ಹಿಂದೆಯೇ ಹೇಳಿದ್ದೆ. ಈಗ ನೈತಿಕತೆ ಇಲ್ಲದೆ ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ಸರಿಯಲ್ಲ ಎಂದರು. ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಒಂದಾಗುವುದು, ಬಿಜೆಪಿ ಎನ್‌ಸಿಪಿ ಒಂದಾಗುವುದು ನೈತಿಕತೆ ಇಲ್ಲದಿರುವುದನ್ನು ಸೂಚಿಸುತ್ತದೆ. ಜನರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಕುರಿತು ಪ್ರಶ್ನಿಸಿದಾಗ ಬಹುಮತ ಬಾರದೆ ಇದ್ದಾಗ ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಸರ್ವಪಕ್ಷಗಳ ಸರಕಾರ ಆಗಬೇಕಾದರೆ ಕೆಲವರು ತ್ಯಾಗ ಮಾಡಬೇಕಾಗುತ್ತದೆ. ಉದಾರತೆ ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಸ್ಲಿಮರ ಒಂದು ವರ್ಗ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಪೀಲು ಸಲ್ಲಿಸುವುದಿಲ್ಲವೆಂದು ತಿಳಿಸಿದೆ ಎಂದರು. ಮುಸ್ಲಿಮ್ ಕಾನೂನು ಮಂಡಳಿ ಅರ್ಜಿ ಸಲ್ಲಿಸುತ್ತದೆ ಎಂದು ಹೇಳಿದಾಗ ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸುತ್ತದೋ ಎಂದು ನೋಡಬೇಕು ಎಂದರು.