ಕಡೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನವಿರೋ ಧಿ ನೀತಿಗಳಿಂದ ಬಡವರು ಮತ್ತು ರೈತರು ಅನುಭವಿಸುತ್ತಿರುವ ನೋವುಗಳನ್ನು ಕಂಡು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಪ್ರಾದೇಶಿಕ ಪಕ್ಷವನ್ನು ಯುವಕರು ಸೇರುತ್ತಿದ್ದಾರೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ತಾಲೂಕಿನ ನಿಡುವಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಯುವಕರ ಜೆ.ಡಿ.ಎಸ್. ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೆಡಿಎಸ್‌ನಲ್ಲಿರುವ ಹಿರಿಯ ಕಾರ್ಯಕರ್ತರು ಇಂದು ಸೇರಿದ ಯುವ ನಾಯಕರನ್ನು ಹುರಿದುಂಬಿಸಿ ಅವರನ್ನು ಪಕ್ಷದ ಅವಿಭಾಜ್ಯ ಅಂಗವಾಗಿ ಗುರುತಿಸಬೇಕಿದೆ. ಪಕ್ಷ ಜಾತ್ಯತೀತ ಪಕ್ಷ ಎಂಬುದನ್ನು ನನ್ನ ಕ್ಷೇತ್ರದಲ್ಲಿನ ಜನತೆ ಈ ಹಿಂದೆಯೇ ಸಾಕಾರ ಮಾಡಿದ್ದಾರೆ. ಹೊಸ ವ್ಯವಸ್ಥೆಯೊಂದಿಗೆ ಹೊಸ ಯುವಕರ ತಂಡದೊಂದಿಗೆ ಪಕ್ಷ ಸಂಘಟನೆ ಮಾಡಲು ಹಿರಿಯ ಕಾರ್ಯಕರ್ತರು ಸಹಕರಿಸಬೇಕಿದೆ.
ನೀವು ನಮ್ಮ ಮೇಲೆ ನಂಬಿಕೆ ಇಟ್ಟು ನಮ್ಮೊಂದಿಗೆ ಹೆಜ್ಜೆ ಹಾಕಲು ಬಂದಿದ್ದೀರಿ. ನಿಮ್ಮ ನಂಬಿಕೆ ಹುಸಿಯಾಗದಂತೆ ನಿಮ್ಮನ್ನು ನಡೆಸಿಕೊಳ್ಳಲಾಗುವುದು ಎಂದರು. ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, 2006ರಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಝೀರೋ ಇದ್ದಾಗ ವೈ.ಎಸ್.ವಿ. ದತ್ತ ಅವರ ಆಗಮನದ ನಂತರ ಸಂಘಟನೆಯ ಮೂಲಕ ನಾವೆಲ್ಲರೂ ಸೇರಿ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಿದ ನಂತರ ದತ್ತ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ ಜನತೆಗೆ ಸೇವೆ ಸಲ್ಲಿಸಿರುವುದು ಇತಿಹಾಸ.
ಆದರೆ ಪಕ್ಷವು ಇದೀಗ ಯುವ ಪೀಳಿಗೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಕ್ಷೇತ್ರದ ವೀರಶೈವ, ಕುರುಬ ಜನಾಂಗದ ಯುವಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮತ್ತೂಮ್ಮೆ ಜೆಡಿಎಸ್ ಬಲಿಷ್ಠವಾಗುತ್ತಿದೆ. ಕೇಂದ್ರದ ಮೋದಿ ಸರ್ಕಾರ ಯುವಕರಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ಮತ ಗಳಿಸಿ ಅಧಿ ಕಾರಕ್ಕೆ ಬಂದಿತು. ಆದರೆ ಇಲ್ಲಿಯವರೆವಿಗೂ ಯುವಕರಿಗೆ ಉದ್ಯೋಗ ಕನಸಾಗಿಯೇ ಉಳಿದಿದೆ.
ಇದಕ್ಕೆ ಸರಿಯಾದ ಪಾಠ ಕಲಿಸಲು ಯುವ ಶಕ್ತಿ ಸಂಘಟನೆಯಾಗಬೇಕಾಗಿದೆ. ಈ ಸಂಘಟನೆಯೇ ಜೆಡಿಎಸ್‌ನ ಯುವ ಸಂಘಟನೆಯಾಗಿ ಹೊರಹೊಮ್ಮಲಿದೆ ಎಂದರು. ಬಿಜೆಪಿ,ಕಾಂಗ್ರೆಸ್ ತೊರೆದ ನಿಡುವಳ್ಳಿಯ ಅನೇಕ ಯುವಕರಾದ ಲೋಕೇಶ್, ಮಂಜುನಾಥ್, ವೇದಮೂರ್ತಿ, ವಿಶ್ವನಾಥ್, ರಾಜು, ಪ್ರಕಾಶ್ ಮತ್ತಿತರರು ದತ್ತ ಅವರ ಮೇಲಿನ ಅಭಿಮಾನದಿಂದ ಜೆ.ಡಿ.ಎಸ್.ಪಕ್ಷವನ್ನು ಸೇರಿದರು.
ಕಡೂರು ಪಟ್ಟಣದ ದಂತ ವೈದ್ಯ ಡಾ|ನರಸಿಂಹಮೂರ್ತಿ ಸಹ ಇದೇ ಸಂದರ್ಭದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ರಾಜ್ಯ ಯವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ.ಆರ್. ಪ್ರೇಮಕುಮಾರ್, ಎಪಿಎಂಸಿ ಸದಸ್ಯ ಬಿದರೆ ಜಗದೀಶ್, ಪಂಚನಹಳ್ಳಿ ಪಾಪಣ್ಣ, ಮುಬಾರಕ್, ಮೋಹನ್, ಕೆ.ವಿ. ಮಂಜುನಾಥ್ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.