Advertisement
ದೇಶದೆಲ್ಲೆಡೆ ಮಾ. 1ರಿಂದ 15ರ ವರೆಗೆ ಆಗಿರುವ ಮುಂಗಾರು ಪೂರ್ವ ಮಳೆಯ ಸರಾಸರಿ ಪ್ರಮಾಣ 96.8 ಮಿ.ಮೀ.ಗಳಷ್ಟಿದೆ. ಇದು ಶೇ. 22ರಷ್ಟು ಕೊರತೆ ಎನಿಸಿದ್ದು, ಮಾ. 1ರಿಂದ ಎ. 24ರ ಅವಧಿಯಲ್ಲಿ ಸುರಿದ ಮಳೆಯಲ್ಲಿ ಶೇ. 27ರಷ್ಟು ಕೊರತೆ ಉಂಟಾಗಿದೆ. ಈ ಕೊರತೆ ಈಗಲೂ ಮುಂದುವರಿದಿದ್ದು, ಅದಕ್ಕೆ ಇತ್ತೀಚೆಗೆ ದೇಶದ ಪೂರ್ವ, ಈಶಾನ್ಯ ರಾಜ್ಯಗಳಲ್ಲಿ ಕಾಣಿಸಿಕೊಂಡ ತೀವ್ರ ಮಳೆಯೇ ಕಾರಣ ಎಂದು ಇಲಾಖೆ ತಿಳಿಸಿದೆ.
ಈ ನಡುವೆ ಆಗ್ನೇಯ ದಿಕ್ಕಿನ ಕಡೆಯಿಂದ ಬೀಸುತ್ತಿರುವ ಮುಂಗಾರು ಮಾರುತಗಳು ದಕ್ಷಿಣ ಅಂಡಮಾನ್ ಸಾಗರ ವನ್ನು ಮುಟ್ಟಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಇವು ಉತ್ತರ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ದ್ವೀಪಗಳನ್ನು ತಲುಪುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.