Advertisement

ಮದ್ಯನಿಷೇಧಕ್ಕೆ ಮನಿಯಾರ್ಡರ್ ‌ಚಳವಳಿ

07:33 AM May 19, 2020 | Lakshmi GovindaRaj |

ಕೊಳ್ಳೇಗಾಲ: ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದ್ಯನಿಷೇಧ ಮಾಡಿತ್ತು. ಇದರಿಂದ ಲಕ್ಷಾಂತರ ಮದ್ಯವ್ಯಸನಿಗಳು ಚಟದಿಂದ ಮುಕ್ತರಾಗಿದ್ದರು. ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬ ಗಳಲ್ಲಿ ನೆಮ್ಮದಿ  ನೆಲೆಸಿತ್ತು. ಮಹಿಳೆಯರು ಮಕ್ಕಳು ಹಿಂಸೆ ಇಲ್ಲದ ದಿನಗಳನ್ನು ಕಾಣಲು ಸಾಧ್ಯವಾಯಿತು.

Advertisement

ಇದನ್ನು ಮುಂದುವರಿಸಲು ಮಹಿಳೆಯರಿಂದ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳ ಖಜಾನೆಗೆ ಕಳುಹಿಸುವ ಚಳವಳಿ ಗ್ರಾಮೀಣ ಕೂಲಿ ಕಾರ್ಮಿಕರ  ಸಂಘಟನೆ ಹಮ್ಮಿಕೊಂಡಿದೆ ಎಂದು ಸಂಚಾಲಕಿ ಪುಟ್ಟಮ್ಮ ತಿಳಿಸಿದ್ದಾರೆ. ಸರ್ಕಾರ ಆದಾಯದ ನೆಪ ಹೇಳಿ ಸಮಾಜ ದ ಎಲ್ಲಾ ವರ್ಗದ ಜನರ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ.

ಮದ್ಯ ಸೇವನೆಯಿಂದ  ಕೊಲೆ, ಆಸ್ತಿಪಾಸ್ತಿ ಹಾನಿ, ಹಿಂಸೆ, ದೌರ್ಜನ್ಯ ಹೆಚ್ಚುತ್ತಿದೆ. ಮತ್ತೂಂದೆಡೆ ಜನರಿಗೆ ಉದ್ಯೋಗ ಇಲ್ಲ, ಕೂಲಿ ಇಲ್ಲ, ಕೈಯಲ್ಲಿ ಹಣ ಇಲ್ಲ. ಮದ್ಯವ್ಯಸನಿಗಳು ಮನೆಯಲ್ಲಿ ದ್ದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿ ಗಳಿಗೆ ಗಿರವಿ ಇಡುತ್ತಿದ್ದಾರೆ.  ಭದ್ರತೆಗಾಗಿ ನೀಡಿದ ಆಹಾರ ದಾನ್ಯ ಜೀವನ ನಿರ್ವಹಣೆ ಗಾಗಿ ಜನಧನ್‌, ಕಾರ್ಮಿಕ ಕಾರ್ಡ್‌ಗಳಿಗೆ ಜಮಾ ಮಾಡಿದ ಹಣವೆಲ್ಲ ಮದ್ಯದಂಗಡಿ ಯ ಮೂಲಕ ಸರ್ಕಾರದ ಖಜಾನೆಗೆ ಸೇರುವಂತಾಗಿದೆ.

ರಾಜ್ಯ ಸರ್ಕಾರದ ಖಜಾನೆಯನ್ನು  ತುಂಬುವ ಸಲುವಾಗಿ ಅಂಚೆ ಮನಿಯಾರ್ಡರ್‌ ಮೂಲಕ ತುಂಬಿಸುವ ಪ್ರಯತ್ನ ವನ್ನು ಗ್ರಾಮಿಣ ಕೂಲಿ ಕಾರ್ಮಿಕ ಸಂಘಟ ನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ವಿನೂತನ ಹೊರಾಟ ಹಮ್ಮಿಕೊಳ್ಳಲಿದೆ  ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next