Advertisement

“ಮೋದಿ ಸರಕಾರದಿಂದ ದೇಶದ ಆರ್ಥಿಕತೆ ಸರ್ವನಾಶ’

10:25 PM Apr 14, 2019 | Sriram |

ಮಹಾನಗರ: ಐದು ವರ್ಷಗಳ ಹಿಂದೆ ಕಪ್ಪು ಹಣ ತರುವುದಾಗಿ, ಭ್ರಷ್ಟಾಚಾರ ನಿಗ್ರಹಿಸುವುದಾಗಿ, ಅಚ್ಛೇದಿನ್‌, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಮುಂತಾದ ಭರವಸೆಗಳನ್ನು ನೀಡಿ, ತನ್ನನ್ನು ತಾನು ಚಾಯ್‌ವಾಲಾ, ಫಕೀರ ಮುಂತಾದ ಹೆಸರಿನಿಂದ ಕರೆಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಯಾವುದೇ ಭರವಸೆಗಳನ್ನು ಈಡೇರಿಸದೆ ದೇಶದ ಜನರಿಗೆ ಮಂಕುಬೂದಿ ಎರಚಿ ಇಡೀ ದೇಶದ ಆರ್ಥಿಕತೆಯನ್ನೇ ಸರ್ವನಾಶ ಮಾಡಿದ್ದಾರೆ. ಇದೀಗ ಮತ್ತೂಮ್ಮೆ ಚೌಕಿದಾರ್‌ ಹೆಸರಿನಲ್ಲಿ ಅಧಿಕಾರಕ್ಕೇರಿ ದೇಶವನ್ನೇ ಲೂಟಿ ಮಾಡಲು ಹೊರಟಿದ್ದಾರೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್‌ಕುಮಾರ್‌ ಬಜಾಲ್‌ ಆರೋಪಿಸಿದರು.

Advertisement

ಉರ್ವಸ್ಟೋರಿನಲ್ಲಿ ನಡೆದ ಸಿಪಿಎಂ ಕಾರ್ಯಕರ್ತರ ಮತ್ತು ಹಿತೈಷಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ 25 ವರ್ಷಗಳಿಂದ ಬಿಜೆಪಿ ಗೆದ್ದು ಬಂದಿದ್ದರೂ, 10 ವರ್ಷಗಳಿಂದ ನಳಿನ್‌ಕುಮಾರ್‌ ಸಂಸದರಾಗಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮ ವಹಿಸಿಲ್ಲ. ಇಂತಹ ಸಂಸದರು ಪ್ರಜ್ಞಾವಂತ ಜಿಲ್ಲೆಯ ಪ್ರತಿಷ್ಠೆಗೆ ಕಪ್ಪು ಚುಕ್ಕೆ. ಅಂತಹವರನ್ನು ಹೀನಾಯವಾಗಿ ಸೋಲಿಸುವ ಮೂಲಕ ಪ್ರಬಲ ಜಾತ್ಯತೀತ ಶಕ್ತಿಗಳ ಗೆಲುವಿಗೆ ಶ್ರಮಿಸಬೇಕು ಎಂದ ರು. ಮನೋಜ್‌ ಉರ್ವಸ್ಟೋರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪ್‌, ರಘುವೀರ್‌, ಕಿಶೋರ್‌,ಇಕ್ಬಾಲ್‌, ನಾಗೇಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next