ಇಂಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎಂಟು ವರ್ಷದಲ್ಲಿ ನೀಡಿದ ಭರವಸೆ ಈಡೇರಿಸಿದೆ. ಕೆಲವು ಯೋಜನೆ ಮತ್ತಷ್ಟು ಗಟ್ಟಿಗೊಳಿಸಿ ಮುಂದುವರಿದಿದೆ. ಮತ್ತೆ ಕೆಲವು ಹೊಸ ಯೋಜನೆಗಳನ್ನು ಹುಟ್ಟು ಹಾಕಿ ಅನುಷ್ಠಾನ ಮಾಡುತ್ತಿದೆ. ಮೋದಿಜಿ ರೈತಪರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ರೈತ ಅಶೋಕ ಅಕಲಾದಿ ಅವರ ತೋಟದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ನಡೆದ ಮೋದಿಯವರ ಎಂಟು ವರ್ಷದ ಸಾಧನೆ ಆಚರಣೆ ಮತ್ತು ರೈತರಿಗಾಗಿ 21000 ಕೋಟಿ ರೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಮಿಷನ್, ಜನಧನ ಯೋಜನೆ, ತ್ರಿವಳಿ ತಲಾಖ್ ನಿಷೇಧ,ಅಯೋಧ್ಯ ರಾಮ ಮಂದಿರ ನಿರ್ಮಾಣ, ಕೊರೊನಾ ಲಸಿಕಾ ಅಭಿಯಾನ, ನೋಟು ಅಮಾನ್ಯೀಕರಣ ಸೇರಿದಂತೆ ಅವರ ಕೊಡುಗೆ ಅನನ್ಯ ಎಂದರು. ಈ ಸಂದರ್ಭದಲ್ಲಿ ಟಿವಿ ಮೂಲಕ ಪ್ರಧಾನಮಂತ್ರಿಯವರ 8 ವರ್ಷದ ಸಾಧನೆಯ ನೇರಪ್ರಸಾರವನ್ನು ರೈತರು, ಸಂಸದರು, ಮುಖಂಡರು ವೀಕ್ಷಿಸಿದರು.
ಇಂಡಿಯ ಪ್ರಗತಿಪರ ರೈತರಾದ ಮಲ್ಲಪ್ಪ ಲಾಳಸಂಗಿ, ಶಿವಾನಂದ ಕುಂಬಾರ, ಅಣ್ಣಾರಾಯ ಬೋಳೆಗಾಂವ, ಶ್ರೀಶೈಲ ಅಕಲಾದಿ, ಕಲ್ಲಪ್ಪ ತಾಂಬೆ, ಮಲ್ಲಪ್ಪ ಜೋಗೂರ, ದೀಪು ರಾಠೊಡ, ಶೆಟ್ಟು ಚವ್ಹಾಣ, ಮಹಾಂತೇಶ ಲಾಳಸಂಗಿ, ಬಲಭೀಮ ಇಂಗಳೆ, ಬಾಬು ಹೊಟಗಿ, ಮಹಾದೇವ ನಾಟೀಕಾರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಅಪ್ಪುಗೌಡ ಪಾಟೀಲ, ಶೀಲವಂತ ಉಮರಾಣಿ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ವೇಂಕಟೇಶ ಕುಲಕರ್ಣಿ, ಅಶೋಕ ಅಕಲಾದಿ, ಬುದ್ದುಗೌಡ ಪಾಟೀಲ, ಅನಿಲ ಜಮಾದಾರ, ಅನಿಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಭೀಮರಾಯ ಮದರಖಂಡಿ, ಅಶೋಕಗೌಡ ಪಾಟೀಲ ಇದ್ದರು.