Advertisement
ಐವರು ಗಣಾಧೀಶ್ವರರಲ್ಲಿ ಕೆಂಪೇಶ್ವರ, ಕೋಲುಶಾಂತೇಶ್ವರ, ಮದ್ದಾನೇಶ್ವರ ತ್ರಿಮೂರ್ತಿ ಗಣಾಧೀಶ್ವರರು ಹರಪನಹಳ್ಳಿ ತಾಲೂಕಿನಲ್ಲಿಯೇ ನೆಲೆಸಿರುವುದು ವಿಶೇಷವಾಗಿದೆ.
Related Articles
Advertisement
ದೇವಾಲಯದಲ್ಲಿ 6 ಗುಹೆ: ಮಠದ ಆವರಣದಲ್ಲಿರುವ ಮದ್ದಾನೇಶ್ವರ ದೇವಾಲಯದಲ್ಲಿ 6 ವಿಶೇಷ ಗುಹೆಗಳಿವೆ. ಅದರಲ್ಲಿ ಹೂವಿನಹಡಗಲಿ ತಾಲೂಕಿನ ಬೆಟ್ಟದ ಮಲ್ಲೇಶ್ವರ ದೇವಸ್ಥಾನ, ತಾಲೂಕಿನ ಬಾಗಳಿ ಕಲ್ಲೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಉಳಿದಂತೆ ಪಾತಾಳ ಗಂಗಮ್ಮ, ವ್ಯಾಯಮ ಶಾಲೆ, ಪಾಠ ಶಾಲೆ, ವಿಶ್ರಾಂತಿ ಗೃಹದ ಅಕಾರಗಳ್ಳುಳ ಗುಹೆಗಳಿವೆ. ವಿಶೇಷವಾಗಿ ಗುಹೆಯಲ್ಲಿರುವ ಪಾತಾಳ ಗಂಗಮ್ಮ ಬಾವಿಗೆ ತೆರಳಿ ಮಕ್ಕಳಾಗದವರು ಅಲ್ಲಿನ ನೀರು ಸೇವಿಸಿದರೇ ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ನೆಲೆಯೂರಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಅನೇಕ ಪವಾಡಗಳ ಮೂಲಕ ಜನಮನದಾಳದಲ್ಲಿ ನೆಲೆಸಿರುವ ಗೋಣಿಬಸವೇಶ್ವರ ರಥೋತ್ಸವ ಮಾ.17ರಂದು ಸಂಜೆ 4.30ಕ್ಕೆ ಜರುಗಲಿದೆ. ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರ ದಂಡು ಆಗಮಿಸುತ್ತದೆ. ಜಾತ್ರೆ ಆರಂಭಕ್ಕೂ ಮುನ್ನ ಎಂಟು ದಿನಗಳ ಮುಂಚೆಯೊ ದೇವರ ಪಲ್ಲಕ್ಕಿ ಉತ್ಸವ ನಡೆದಿದ್ದು, 8 ದಿನಗಳ ಕಾಲ ಪ್ರತಿ ನಿತ್ಯ ತೇರು ಚಕ್ರ ಹಾಗೂ ಕಣಗಳಿಗೆ ವಿಶೇಷ ಪೂಜೆ ಮತ್ತು ಹುಚ್ಚಯ್ಯ ದೇವರ ಸಣ್ಣ ರಥೋತ್ಸವ ನಡೆಯುತ್ತದೆ. ಬಸವ ಉತ್ಸವ, ಮುಖ್ಯ ರಥೋತ್ಸವದ ಮರು ದಿನವಾದ ಮಾ.18ರಂದು ಓಕಳಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮದ್ದಾನೇಶ್ವರ(ಗೋಣಿಬಸವೇಶ್ವರ) ಸಂಸ್ಥಾನದ ಪಟ್ಟಾಧ್ಯಕ್ಷ ಚಿನ್ಮಯಿ ಸ್ವಾಮೀಜಿ ತಿಳಿಸಿದ್ದಾರೆ. ದೇವರ ದರ್ಶನದಿಂದ ರೋಗ ದೂರ ಅನೇಕ ಪವಾಡಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಗೋಣಿಬಸವೇಶ್ವರ ದರ್ಶನ ಪಡೆಯಲು ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಮಧ್ಯ ಕರ್ನಾಟಕದಲ್ಲಿ ಪಂಚಗಣಾ ಧೀಶ್ವರರು ಜನಮಾಸನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪ್ರತಿವರ್ಷ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯುವುದರಿಂದ ಅನೇಕ ರೋಗಗಳು ದೂರವಾಗಲಿದ್ದು, ಜಾತ್ರೆಯಲ್ಲಿ ಭಾಗವಹಿಸುವುದೇ ಭಕ್ತರ ಪುಣ್ಯದ ಕೆಲಸ.
ಎಚ್.ಬಿ.ಪರುಶುರಾಮಪ್ಪ, ಜಿಪಂ ಸದಸ್ಯರು ಎಸ್.ಎನ್.ಕುಮಾರ್ ಪುಣಬಗಟ್ಟಿ