ಹೀಗೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದು ಬೇರಾರೂ ಅಲ್ಲ, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್. ಬರಪೀಡಿತ ರಾಜ್ಯಗಳಲ್ಲಿ ಪರಿಹಾರ ಕ್ರಮಕ್ಕೆ ಆಗ್ರಹಿಸಿ ಸ್ವರಾಜ್ ಅಭಿಯಾನ್ ಎನ್‌ಜಿಒ ಸಲ್ಲಿಸಿದ್ದ ಹೊಸ ಅರ್ಜಿಯನ್ನು ವಿರೋಧಿಸುತ್ತಾ ವೇಣುಗೋಪಾಲ್ ಈ ಮಾತುಗಳನ್ನಾಡಿದ್ದಾರೆ.
Advertisement
ಎಲ್ಲ ರಾಜ್ಯಗಳಲ್ಲೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯ ಆಹಾರ ಆಯೋಗಗಳನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಸೂಚಿಸಿತು. ಈ ವೇಳೆ, ನ್ಯಾ| ಪ್ರಶಾಂತ್ ಭೂಷಣ್ ಅವರು ಪ್ರತಿನಿಧಿಸುತ್ತಿರುವ ಎನ್‌ಜಿಒ ವಿರುದ್ಧ ಹರಿಹಾಯ್ದ ವೇಣುಗೋಪಾಲ್, “ಪ್ರತಿ ಬಾರಿ ಹೊಸ ಅರ್ಜಿ ಸಲ್ಲಿಸಲಾಗುತ್ತಿದೆ. ನಾವು ಕೈಗೊಂಡ ಕ್ರಮಗಳನ್ನು ವಿವರಿಸಿ ಅಫಿದವಿತ್ ಸಲ್ಲಿಸಿದ್ದೇವೆ. ಎಲ್ಲದಕ್ಕೂ ಮಿತಿಯಿದೆ. ನ್ಯಾಯಮೂರ್ತಿಗಳೇ ಸರಕಾರ ನಡೆಸುವಂತಾಗಬಾರದು. ನಾವೇನೂ ಪವಾಡ ಮಾಡಲು ಆಗುವುದಿಲ್ಲ’ ಎಂದರು.