Advertisement
ಶಬರಿಮಲೆ ಅಯ್ಯಪ್ಪ ಸಂರಕ್ಷಣಾ ಸಮಿತಿ ಜಯನಗರದ ರಾಷ್ಟ್ರೋತ್ಥಾನ ಯೋಗ ಮತ್ತು ಫೀಟ್ನೆಸ್ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಶಬರಿಮಲೆಯಲ್ಲಿ ಏನು ನಡೆಯುತ್ತಿದೆ’? ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಾಲಿ ಜೆಡಿಎಸ್ – ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿಸಚಿವೆಯೊಬ್ಬರು ಈ ಹಿಂದೆ ಶಬರಿಮಲೆ ವಿವಾದದ ಕೇಂದ್ರ ಬಿಂದುವಾಗಿದ್ದರು ಎಂದು ಟೀಕಿಸಿದರು.
ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಯತೀಶ್‌ಚಂದ್ರ ಕೂಡ ತಮ್ಮ ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ದಕ್ಷಿಣ ಭಾರತದ ದೇವಾಲಯಗಳಿಗೂ ಬರಬಹುದು: ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಗಳು ಮಧ್ಯಪ್ರವೇಶ ಅಷ್ಟೊಂದು ಸೂಕ್ತವಲ್ಲ. ಈ ಪ್ರವೃತ್ತಿ ಹೀಗೆ ಮುಂದುವರಿದರೆ ಈಗ ಶಬರಿಮಲೆಗೆ ಬಂದಿರುವ ಪರಿಸ್ಥಿತಿ ಮುಂದೆ ದಕ್ಷಿಣ ಭಾರತದ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರ ಮೂಕಾಂಬಿಕೆ, ಗುರುವಾಯೂರು, ಅನಂತ ಪದ್ಮನಾಭ ಸ್ವಾಮಿ, ತಿರುಪತಿ ತಿಮ್ಮಪ್ಪ ದೇವಸ್ಥಾಗಳಿಗೂ ಬಂದರೂ ಅಚ್ಚರಿಯೇನಿಲ್ಲ ಎಂದರು.
Related Articles
Advertisement