Advertisement

ಅನುದಾನ ರಹಿತ ಶಾಲಾ ಸಿಬಂದಿಗೆ ವೇತನ ನೀಡುವಂತೆ ಆದೇಶಿಸಿ ಸಚಿವರಿಗೆ ಕ್ಯಾ|ಕಾರ್ಣಿಕ್‌ ಮನವಿ

08:09 AM May 13, 2020 | mahesh |

ಮಂಗಳೂರು: ಲಾಕ್‌ಡೌನ್‌ ಬಳಿಕ ಕೆಲವು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕ-ಶಿಕ್ಷಕೇತರ ಸಿಬಂದಿಗೆ ಆಡಳಿತ ಮಂಡಳಿ ವೇತನ ಪಾವತಿ ಮಾಡದಿರುವುದು ಗಮನಕ್ಕೆ ಬಂದಿದ್ದು, ವೇತನ ಪಾವತಿಸುವ ಬಗ್ಗೆ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಆದೇಶ ನೀಡಬೇಕೆಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಲ್ಲಿ ಮನವಿ ಮಾಡಿದ್ದಾರೆ.

Advertisement

ಲಾಕ್‌ಡೌನ್‌ ಜಾರಿಯಾದ ಬಳಿಕ ಉಂಟಾದ ಉದ್ಯೋಗ ಅಭದ್ರತೆ ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬಂ ದಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 3 ಲಕ್ಷಕ್ಕೂ ಅ ಧಿಕ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಲಾಕ್‌ಡೌನ್‌ ಬಳಿಕ ತಮಗೆ ಸಂಬಳ ನೀಡದಿರುವ ಬಗ್ಗೆ ಬೋಧಕ- ಬೋಧಕೇತರ ಸಿಬಂದಿ ಅಳಲನ್ನು ವ್ಯಕ್ತಪಡಿಸಿದ್ದು, ವೇತನ ಸಿಗದೆ ಅವರಿಗೆ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಇದೇ ರೀತಿ ಮುಂದುವರಿದಲ್ಲಿ ಅವರ ಜೀವನ ಇನ್ನಷ್ಟು ಶೋಚನಿಯ ಆಗಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next