Advertisement
ಮಾರ್ಚ್ ತಿಂಗಳ ಅನಂತರ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಷರ ದಾಸೋಹದ ಅಕ್ಕಿ ಬೇಳೆ ಸಹಿತ ಯಾವುದೇ ಆಹಾರ ಸಾಮಗ್ರಿ ಗಳು ಸರಬರಾಜುಗೊಂಡಿಲ್ಲ. ಇದರಿಂದ ಆತಂಕಗೊಂಡಿರುವ ಕೆಲವು ಶಾಲೆಗಳ ಶಿಕ್ಷಕರು, ಮನೆಯಿಂದಲೇ ತಿಂಡಿ ತರುವಂತೆ ಮಕ್ಕಳಿಗೆ ತಿಳಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Related Articles
ಪ್ರಾಥಮಿಕ ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸಹಿತ ಆಹಾರ ಸಾಮಗ್ರಿಗಳ ಸರಬರಾಜನ್ನು ಜಿ.ಪಂ. ವ್ಯಾಪ್ತಿಯಲ್ಲಿ ನಡೆದ ಏಲಂ ಪ್ರಕ್ರಿಯೆಯಲ್ಲಿ ಒಂದು ವರ್ಷದ ಗುತ್ತಿಗೆಗೆ ಕಿಶನ್ ಪಡೆದುಕೊಂಡಿದ್ದಾರೆ. ಅವರು ಆಹಾರ ಸಾಮಗ್ರಿಗಳನ್ನು ಸಕಾಲದಲ್ಲಿ ಶಾಲೆಗಳಿಗೆ ಸರಬರಾಜು ಮಾಡಿಲ್ಲ. ಈ ಕಾರಣದಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗೆ ಅವರೇ ಹೊಣೆ ಎನ್ನುತ್ತಾರೆ ಅಕ್ಷರ ದಾಸೋಹದ ಅಧಿಕಾರಿಗಳು.
Advertisement