Advertisement

ಶಿರಸಿ:  ಜಲಾಯನ ಪ್ರದೇಶಕ್ಕೆ ಸೇರುವ ಕೋಳಿ ಫಾರಂನ ಗಲೀಜು‌ ನೀರು: ಸಾರ್ವಜನಿಕರ ಆಕ್ರೋಶ

03:30 PM Dec 15, 2021 | Team Udayavani |

ಶಿರಸಿ: ಇಲ್ಲಿನ ಹುಲೇಕಲ್ ರಸ್ತೆಯ ಹುತಗಾರ ಬಳಿಯ ಕೋಳಿ ಫಾರಂನ ಗಲೀಜು‌ ನೀರು ಲೊಕೋಪಯೋಗಿ ಇಲಾಖೆ‌ ನೂತನವಾಗಿ ನಿರ್ಮಾಣ ಮಾಡಿದ ಗಟಾರಕ್ಕೆ ಬಿಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಈ ಗಲೀಜು ನೇರವಾಗಿ ಕೆಂಗ್ರೆ ಜಲಾಯನ ಪ್ರದೇಶಕ್ಕೆ ಸೇರಲಿದೆ. ಕೆಂಗ್ರೆಯಿಂದ‌ ಶಿರಸಿಗೆ  ಕುಡಿಯುವ ನೀರೂ ಕೂಡ ಪೂರೈಕೆ ಆಗಲಿದೆ. ಸಮೀಪ ಸರಕಾರಿ ಶಾಲೆಗಳಿದ್ದು, ಅದರ ಕುಡಿಯುವ ನೀರಿನ ಬಾವಿಗೂ ಸೇರುವ ಆತಂಕ‌ ನಿರ್ಮಾಣ ಆಗಿದೆ.

ಕಳೆದ ಹಲವು ವರ್ಷಗಳಿಂದ ಕೋಳಿ ಫಾರಂನಿಂದ ವಾಸನೆ ಬರುತ್ತಿದ್ದು, ಸುತ್ತಲಿನ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಈಗಾಗಲೇ ನಿವಾಸಿಗಳು ತಹಸೀಲ್ದಾರರಿಗೆ, ಗ್ರಾಮ ಪಂಚಾಯತಕೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ ಎಂದು ಅಸಮಧಾನ ವ್ಯಕ್ತವಾಗಿದೆ.

ಸಂಬಂಧಪಟ್ಟ ಇಲಾಖೆ, ಹುತಗಾರ ಪಂಚಾಯತ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ನಡೆಸುವದಾಗಿ ಅಸಮಧಾನಿತ ನಾಗರೀಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next