Advertisement
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ತೃತೀಯ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಪ್ರಸ್ತುತ ಸಂದಭìದಲ್ಲಿ ಜಾಗತಿಕ ಸಂಗೀತ ಶಾಸ್ತ್ರವೊಂದನ್ನು ಬೆಳೆಸಲು ವಿಶ್ವದ ಎಲ್ಲಾ ರಾಷ್ಟ್ರಗಳೂ ಒಗ್ಗೂಡಿ ಬುದ್ಧಿಜೀವಿಗಳು ಹಾಗೂ ದೂರದೃಷ್ಠಿ ಹೊಂದಿರುವ ಸಂಗೀತ ತಜ್ಞರ ಅಕಾಡೆಮಿ ಸ್ಥಾಪಿಸಬೇಕಿದೆ.
Related Articles
Advertisement
ಪ್ರಸ್ತುತ ಬೆರಳ ತುದಿಯಲ್ಲೇ ಸಾಕಷ್ಟು ಮಾಹಿತಿ ತಂತ್ರಜಾnನಗಳು ಲಭ್ಯವಿದ್ದು, ಗೂಗಲ್ ಮತ್ತು ಯಾಹೂ ರೂಪದಲ್ಲಿ ಗುರುಗಳು ಸಿಗುತ್ತಿದ್ದಾರೆ. ಇದರ ಪರಿಣಾಮ ಗುರು ಮತ್ತು ಶಿಷ್ಯರನ್ನು ಸಂಪರ್ಕಿಸುವ ಮುಖ್ಯವಾಹಿನಿಯಾಗಿ ಸ್ಕೈಫ್ ರಾರಾಜಿಸುತ್ತಿದ್ದು, ಇದರ ಜತೆಗೆ ಲಭ್ಯವಾಗುತ್ತಿರುವ ಅಸಂಖ್ಯಾತ ಧ್ವನಿಮುದ್ರಿತ ಕಾರ್ಯಕ್ರಮಗಳು ಸಂಗೀತದ ಪಯಣವನ್ನು ಹೆಚ್ಚಿನ ವೇಗದಲ್ಲಿ ಮಾಡಲು ಸಹಕಾರಿಯಾಗಿವೆ ಎಂದರು.
ಮನೋಧರ್ಮಕ್ಕೆ ಪುಷ್ಟಿ: ಇಂದಿನ ಆಂತರಿಕ್ಷಯುಗದಲ್ಲಿ ವಿದ್ಯುನ್ಮಾನ ಕ್ಷೇತ್ರದ ಅತ್ಯಾಧುನಿಕ ಸಲಕರಣೆಗಳೊಂದಿಗೆ ವಿವಿಧ ಪ್ರಕಾರದ ಸಂಗೀತಗಳನ್ನು ಕೇಳುವ, ಸಂಗೀತಗಾರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ, ಸಹಯೋಗ ಹೊಂದುವ ಅನೇಕ ಅವಕಾಶಗಳು ಬದುಕಿನ ಭಾಗವಾಗಿದ್ದು, ತನ್ನದೇ ಮನೋಧರ್ಮ ಸೃಷ್ಟಿಸಿಕೊಳ್ಳಲು ಪುಷ್ಟಿನೀಡಿದೆ.
ಮನೋಧರ್ಮ ಸಂಗೀತವು ಭಾರತೀಯ ಶಾಸ್ತ್ರೀಯ ಸಂಗೀತದ ವಿಶಿಷ್ಟ ಶೈಲಿಯಾಗಿದ್ದು, ಹಲವು ಶತಮಾನಗಳಿಂದಲೂ ಸಂಗೀತಗಾರರು ಇದನ್ನು ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಜಾಸ್, ಪೂÂಷನ್, ತಾಳವಾದ್ಯ ಸೇರಿದಂತೆ ಇನ್ನಿತರ ಪ್ರಕಾರಗಳಲ್ಲಿ ಸೂಕ್ಷ್ಮತೆ ಹಾಗೂ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ದಾರಿ ದೀಪವಾಗಿದ್ದು, ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತ ಪ್ರಕಾರಗಳಲ್ಲಿ ನವ ಆಲೋಚನೆಗಳು ಮತ್ತು ಕಾರ್ಯಾಚರಣೆಗಳ ಆರೋಗ್ಯಕರ ವಿನಿಮಯದಲ್ಲಿ ಪಲಿತಗೊಂಡಿದೆ ಎಂದು ಹೇಳಿದರು.
ಫೆ.24ರಂದು ಶಿಲಾನ್ಯಾಸ: ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಗೀತ ವಿವಿ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪ್ರಗತಿಯತ್ತ ಮುನ್ನಡೆಯುತ್ತಿದೆ. ಈಗಾಗಲೇ ಎರಡು ಘಟಿಕೋತ್ಸವವನ್ನು ಪೂರೈಸಿರುವ ವಿವಿಯಲ್ಲಿ 82 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಹಲವು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಸಂಗೀತ ವಿವಿ ಕಾರ್ಯವ್ಯಾಪಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಕಟ್ಟಡವನ್ನು ಹಂಚ್ಯಾ-ಸಾತಗಳ್ಳಿಯಲ್ಲಿ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಹೀಗಾಗಿ ಫೆ.24ರಂದು ಮುಖ್ಯಮಂತ್ರಿಗಳು ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಿದ್ದು, ಇದೇ ಸಂದರ್ಭದಲ್ಲಿ ಕಲಾಸೌರಭ ವಾರ್ತಾ ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು. ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯ್ ಆರ್.ವಾಲಾ, ಸಂಗೀತ ವಿವಿ ಕುಲಸಚಿವರುಗಳಾದ ಪೊ›.ಆರ್.ರಾಜೇಶ್, ಡಾ.ನಿರಂಜನ ವಾನಳ್ಳಿ ಇನ್ನಿತರರು ಹಾಜರಿದ್ದರು.
29 ಮಂದಿಗೆ ಪದವಿ: ತೃತೀಯ ಘಟಿಕೋತ್ಸವದ ಅಂಗವಾಗಿ 26 ಮಹಿಳೆಯರು ಹಾಗೂ 3 ಪುರುಷರು ಸೇರಿದಂತೆ ಒಟ್ಟು 29 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 21 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 8 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪಡೆದರು. ಇದೇ ಸಂದರ್ಭದಲ್ಲಿ 8 ಅಭ್ಯರ್ಥಿಗಳಿಗೆ ಚಿನ್ನದ ಪದಕ ಹಾಗೂ ಇಬ್ಬರಿಗೆ ನಗದು ಬಹುಮಾನ ಸ್ವೀಕರಿಸಿದರು.
ಡಾಕ್ಟರೇಟ್ ಪ್ರದಾನ: ಸಮಾರಂಭದಲ್ಲಿ ಇತ್ತೀಚೆಗಷ್ಟೇ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಮೈಸೂರಿನ ಮಹೋಪಾಧ್ಯಾಯ ಡಾ.ರಾ.ಸತ್ಯನಾರಾಯಣ ಅವರಿಗೆ ಸಂಗೀತ ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಭಾರತೀಯ ಸಂಗೀತದ ಸಾûಾತ್ ಸ್ವರೂಪವೆಂದು ಬಿಂಬಿತವಾಗಿರುವ 90ರ ಹರೆಯದ ರಾ.ಸತ್ಯನಾರಾಯಣ ಅವರಿಗೆ ರಾಜ್ಯಪಾಲ ವಜೂಬಾಯ್ ಆರ್.ವಾಲಾ ಹಾಗೂ ಇನ್ನಿತರ ಗಣ್ಯರು ಡಾಕ್ಟರೇಟ್ ನೀಡಿ ಗೌರವಿಸಿದರು.
ಚಿನ್ನದ ಪದಕ ವಿಜೇತರು: ಸಂಗೀತ ವಿಶ್ವವಿದ್ಯಾನಿಲಯದ ತೃತೀಯ ಘಟಿಕೋತ್ಸವದಲ್ಲಿ 8 ಮಂದಿಗೆ ಚಿನ್ನದ ಪದಕ ನೀಡಲಾಯಿತು. ಅದರಂತೆ ಗೇಯ ಸಂಗೀತ ನಿಕಾಯ ವಿಭಾಗದಲ್ಲಿ ಗೀತಾ ಹೆಬ್ಟಾರ್(2 ಪದಕ), ಬಿ.ಕೆ.ಮಮತಾ, ವಿಜಯ(2 ಪದಕ), ಕೆ.ಎನ್. ಹೇಮಲತಾ. ವಾದ್ಯ ಸಂಗೀತ ನಿಕಾಯದಲ್ಲಿ ವಿ.ಭಾರತೀ ಮೌಳಿ, ಜಿ.ದೀಪಕ್‌ಕುಮಾರ್, ಅರ್ಜುನ್ ಪ್ರಮೋದ್ ಹಾಗೂ ನೃತ್ಯ ನಿಕಾಯದಲ್ಲಿ ಎಂ.ಎಸ್.ಸಿಂಧುರಾವ್ ಅವರಿಗೆ ಚಿನ್ನದ ಪದಕ ನೀಡಲಾಯಿತು.