Advertisement

ಓಣಂನಿಂದ ಸಾಮರಸ್ಯದ ಸಂದೇಶ: ಶಂಕರಮೂರ್ತಿ

08:45 AM Sep 10, 2017 | Harsha Rao |

ಕುಂಬಳೆ: ಜಾತಿ ಮತ ಭೇದ ಮರೆತು ವಿಶ್ವದೆಲ್ಲೆಡೆ ಆಚರಿಸುವ ಓಣಂ ಹಬ್ಬವು ಭಾರತದ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೇರಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆ ಮತ್ತು ಜಾನಪದ ಕಲೆಯೊಂದಿಗೆ ಆಚರಿಸುತ್ತಿರುವ ಈ ಹಬ್ಬವು ಸಾಮರಸ್ಯದ ಸಂದೇಶವನ್ನು ಸಾರುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದರು.

Advertisement

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಸುಬ್ಬಯ್ಯ ಕಟ್ಟೆ ಕನ್ನಡ ಸಂಘ, ತರಂಗಿಣಿ ಫ್ರೆಂಡ್ಸ್‌ ಕ್ಲಬ್‌, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ
ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕೇರಳ
ಜಾನಪದ ಅಕಾಡೆಮಿಗಳ ಸಹಯೋಗದೊಂದಿಗೆ ಕುಡಾಲು ಮೇರ್ಕಳ ಸುಬ್ಬಯ್ಯಕಟ್ಟೆ ಎಎಲ್‌ಪಿ ಶಾಲೆಯಲ್ಲಿ ಶನಿವಾರ ಜರಗಿದ ಓಣಂ ಕನ್ನಡ ಜಾನಪದ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಾವಾರು ಪ್ರಾಂತ್ಯದಂಗವಾಗಿ ಕಾಸರಗೋಡು ಕೇರಳಕ್ಕೆ ಸೇರಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಇಲ್ಲಿ ಸಕ್ರಿಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ ಅವರು, ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಲು ಕರ್ನಾಟಕ ಸರಕಾರ ಎಲ್ಲ ನೆರವನ್ನು ನೀಡುವ ಭರವಸೆ ಇತ್ತರು.

ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ
ನಡೆದ ಆಕರ್ಷಕ ಜಾನಪದ ಸಾಂಸ್ಕೃತಿಕ ಮೆರವಣಿಗೆಯನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯರಾದ ಕೆ.ಆರ್‌. ಜಯಾನಂದ ಮತ್ತು ಪ್ರಸಾದ ರೈ ಕಯ್ನಾರು, ಮಂಜೇಶ್ವರ ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ್‌, ಗಣ್ಯರಾದ ಸೀತಾರಾಮ ಶೆಟ್ಟಿ, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಪ್ರೊ| ಶ್ರೀನಾಥ್‌, ಬಿ.ಕೆ. ಖಾದರ್‌, ಪ್ರಕಾಶನ್‌, ಆರ್‌. ಸುಬ್ಬಯ್ಯಕಟ್ಟೆ, ಬಿ.ಎ. ಖಾದರ್‌, ಪಿ. ರಾಮಚಂದ್ರ ಭಟ್‌ ಉಪಸ್ಥಿತರಿದ್ದರು.

ಸಮ್ಮಾನ: ಸಮಾರಂಭದಲ್ಲಿ ಕ್ರೀಡಾ ವರದಿಗಾರ ಜಗದೀಶ್ಚಂದ್ರ ಅಂಚನ್‌ ಸೂಟರ್‌ಪೇಟೆ, ನಾಟಿ ವೈದ್ಯ ವೈದ್ಯರತ್ನಂ ಮಾತುಕುಟ್ಟಿ ನಾಯರ್‌, ಜಾನಪದ ಕಲಾವಿದ ಮನು ಪಣಿಕ್ಕರ್‌ ಅವರನ್ನು ಸಮ್ಮಾನಿಸಲಾಯಿತು.
ಎಸ್‌.ಕೆ. ಬಾಲಕೃಷ್ಣ ಸ್ವಾಗತಿಸಿದರು. ರವಿ ನಾಯ್ಕಪು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next