Advertisement

ಸಮಾನತೆ ಸಂದೇಶ ಸಾರಿದ ಕನಕದಾಸರು

09:55 PM Jan 19, 2020 | Lakshmi GovindaRaj |

ತಿ.ನರಸೀಪುರ: ಸರಳ ಜೀವನ, ಆದರ್ಶ ವ್ಯಕಿತ್ವ ಹೊಂದಿದ್ದ ಕನಕದಾಸರು ಕುಲ ಕುಲ ಎಂದು ಹೊಡೆದಾಡದೇ ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ಸಂದೇಶ ನೀಡಿದ್ದಾರೆ ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಹೇಳಿದರು.

Advertisement

ಪಟ್ಟಣದ ಶ್ರೀ ಗುಂಜಾನರಸಿಂಹ ದೇವಾಲಯದ ಮುಂಭಾಗ ತಾಲೂಕು ಕುರುಬರ ಸಂಘದ ವತಿಯಿಂದ ಕನಕದಾಸರ 523ನೇ ಜಯಂತ್ಯುತ್ಸವ ಪ್ರಯುಕ್ತ ನಡೆದ ಮೆರವಣಿಗೆಗೆ ನಂದಿಕಂಬಕ್ಕೆ ಪುಷಾcರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸಿದ ಕನಕದಾಸರಂಥ ದಾಸಶ್ರೇಷ್ಠರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಜಾತಿ ರಹಿತವಾದ ಸಮಾಜ ನಿಮಾರ್ಣಕ್ಕೆ ವಾಲ್ಮೀಕಿ, ಕನಕದಾಸರು, ಬುದ್ಧ, ಬಸವಣ್ಣ. ಅಂಬೇಡ್ಕರ್‌ ಅವರು ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದರು ಎಂದರು.

ಮಾನವೀಯ ಮೌಲ್ಯ ಎತ್ತಿ ಹಿಡಿಯಿರಿ: ಮಹನೀಯರ ಆದರ್ಶ ತತ್ವ, ಸಂದೇಶಗಳು ಸಂವಿಧಾನದಲ್ಲಿ ಸೇರಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾತಿ ಮುಕ್ತ ಸಮಾಜ ನಿಮಾರ್ಣಣದ ಜತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುವಂತೆ ಸಲಹೆ ಮಾಡಿದರು.

ದಾಸ ಸಾಹಿತ್ಯ ಬರುವ ಶ್ರೇಷ್ಠರು ಕನಕರು: ಶಾಸಕ ಡಾ.ಯತೀಂದ್ರ ಮಾತನಾಡಿ, ದಾಸ ಸಾಹಿತ್ಯ ಬರುವ ಶ್ರೇಷ್ಠರಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಏಕೈಕ ಶೂದ್ರದಾಸ ರೆಂದರೆ ಅದು ಕನಕದಾಸರು. ಯುದ್ಧ ಬಿಟ್ಟು ಶಾಂತಿಯತ್ತ ವಾಲಿದ ಅಶೋಕ್‌ ರಾಜನಂತೆ ಕನಕದಾಸರು ಕೂಡ ಶಸ್ತ್ರತ್ಯಾಗ ಮಾಡಿ ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಾಮಾಜಿಕ ಸಂದೇಶ ತಮ್ಮ ಕೃತಿ, ಕೀರ್ತನೆಗಳ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು ಎಂದರು.

Advertisement

ಕನಕರ ಆದರ್ಶ ಪಾಲಿಸಿ: ಅಜ್ಞಾನಿಗಳ ಜತೆಗೆ ಜಗಳಕ್ಕಿಂತ ಸುಜ್ಞಾನಿಗಳ ಜತೆ ಜಗಳ ಲೇಸು. ರಾಮಧಾನ್ಯ ಚಿರಿತೆಯಲ್ಲಿ ರಾಗಿ, ಭತ್ತಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಆದರ್ಶ ಚಿಂತನೆಗಳು ನಮ್ಮ ಬದುಕಿನಲ್ಲಿ ಒಂದು ದಿನಕ್ಕೆ ಸೀಮಿತವಾಗದೇ ಸಾರ್ವಕಾಲಿಕವಾಗಿ ಉಳಿಯುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕಾಮದಲ್ಲಿ ಜಿಪಂ ಸದಸ್ಯ ಜಯಪಾಲ್‌ ಭರಣಿ, ಮಾಜಿ ಸದಸ್ಯ ಸೋಮಣ್ಣ, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡ ಸ್ವಾಮಿ, ಬಾದಾಮಿ ಮಂಜು, ಹೆಳವರಹುಂಡಿ ಸೋಮು, ಪ್ರಕಾಶ್‌, ತಾಲೂಕು ಕುರುಬರ ಸಂಘದ ನಿರ್ಗಮಿತ ಅಧ್ಯರಕ್ಷ ತುಂಬಲ ಬಾಬು, ಕಾರ್ಯದರ್ಶಿ ಬಸವರಾಜು, ತಾಪಂ ಅಧ್ಯಕ್ಷ ಉಮೇಶ್‌ ಸ್ಥಾಯಿ ಸಮಿತಿ ಅಧ್ಯ,ಕ್ಷ ಕುಕ್ಕೂರು ಗಣೇಶ್‌, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಸ್ವಾಮಿನಾಥಗೌಡ, ಪಿ.ಪುಟ್ಟರಾಜು, ಮಹದೇವಸ್ವಾಮಿ, ಬಸವಣ್ಣ, ಬಿ.ಮಹದೇವ್‌, ಮಹಿಲಾ ಘಟಕದ ಅಧಕ್ಷೆ ಕುಪ್ಯ ಭಾಗ್ಯಮ್ಮ ಸಹದೇವು, ಕುಮಾರಸ್ವಾಮಿ, ಉಮೇಶ, ಮಾದೇಶ, ಅನುಪ್‌ ಗೌಡ ಇತರರು ಇದ್ದರು.

ಶಾಸಕರಿಂದ ಮೆರವಣಿಗೆಗೆ ಚಾಲನೆ: ತಾಲೂಕು ಕುರುಬರ ಸಂಘ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತ್ಯುತ್ಸವವದ ಅಂಗವಾಗಿ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಉತ್ಸವ ಮೆರವಣಿಗೆಗೆ ಶಾಸಕರಾದ ಎಂ.ಅಶ್ವಿ‌ನ್‌ ಕುಮಾರ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.

ಬಳಿಕ ಆರಂಭಗೊಂಡ ಮೆರವಣಿಗೆಯು ತೇರಿನ ಬೀದಿ, ಭಗವಾನ್‌ ವೃತ್ತ, ಲಿಂಕ್‌ ರಸ್ತೆ, ಜೋಡಿ ರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ಮುಂಭಾಗ ಕ್ಕೆ ತೆರಳಿತು. ಮೆರವಣಿಗೆ ಯಲ್ಲಿ ಕನಕದಾಸ ರ ಪ್ರತಿಮೆ ಸೇರಿದಂತೆ ಡೊಳ್ಳು ಕುಣಿತ, ಗೊರವರ ಕುಣಿತ, ಕೀಲು ಗೊಂಬೆ, ಪೂಜಾ ಕುಣಿತ, ದೇವರ ಕೂಟಗಳು ಸೇರಿದಂತೆ ವಿವಿಧ ಕಲಾ ತಂಡಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ಸ್ತಬ್ಧಚಿತ್ರ ಉತ್ಸವಕ್ಕೆ ಮೆರಗು ತಂದವು.

Advertisement

Udayavani is now on Telegram. Click here to join our channel and stay updated with the latest news.

Next