Advertisement
ಸಾಟಿ ಇಲ್ಲದ ಸಾಹಸ28 ವರ್ಷಗಳಷ್ಟು ಸುದೀರ್ಘ ಅವಧಿಯ ಬಳಿಕ ಭಾರತ 2ನೇ ಸಲ ವಿಶ್ವ ಚಾಂಪಿಯನ್ ಆಗಿ ಮೆರೆಯಿತಾದರೂ ಮೊದಲ ಕಪ್ ಗೆಲುವಿನ ಆ ರೋಮಾಂಚನವೇ ಬೇರೆ. ಇದು ಸಾಟಿ ಇಲ್ಲದ ಸಾಹಸ. ಭಾರತದಂಥ ಕಳಪೆ ತಂಡವನ್ನು ಇಂಥ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಿಸುವುದೇ ಒಂದು ಅವಮಾನ ಎಂದು ಟೀಕಿಸಿದವರೆಲ್ಲ ‘ಕಪಿಲ್ ಡೆವಿಲ್ಸ್’ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು. ಭಾರತದ ಮಹೋನ್ನತ ಸಾಧನೆಗೆ ಕ್ರೀಡಾ ಜಗತ್ತೇ ಸಲಾಂ ಹೇಳಿತ್ತು!
ಅಂದಿನಿಂದ ಪ್ರತೀ ಜೂನ್ 25 ಬಂದಾಗಲೂ ಕಪಿಲ್ ಪಡೆಯ ಯಶೋಗಾಥೆ ಮೈ ಮನವನ್ನೆಲ್ಲ ಪುಳಕಗೊಳಿಸುತ್ತದೆ. ನೆನಪುಗಳೆಲ್ಲ ಉಕ್ಕುಕ್ಕಿ ಬರುತ್ತವೆ. ಈ ಬಾರಿ ಇದರ ಖದರ್ ಬೇರೆಯೇ ಆಗಿದೆ. ಕಾರಣ, ಮತ್ತೂಂದು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂಗ್ಲೆಂಡ್‌ನಲ್ಲೇ ಸಾಗುತ್ತಿದೆ. ವಿರಾಟ್ ಕೊಹ್ಲಿ ಸಾರಥ್ಯ ದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಸೆಮಿ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಹೀಗಾಗಿ 1983ರ ಆ ನೆನಪು ಮತ್ತಷ್ಟು ಗಾಢವಾಗಿ, ಅಷ್ಟೇ ತೀವ್ರವಾಗಿ ಆವರಿಸಿದೆ.
Related Articles
Advertisement