Advertisement
ಸದ್ಯ ಬೆಂಗಳೂರಿನ ಒಟ್ಟಾರೆ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿದಾಟಿವೆ. ಅಕ್ಟೋಬರ್‌ನಲ್ಲಿ (1 ರಿಂದ 17) ನಿತ್ಯ ಸರಾಸರಿ ನಾಲ್ಕು ಸಾವಿರ ಸೋಂಕು ಪ್ರಕರಣ ಗಳು ವರದಿಯಾಗುತ್ತಿವೆ. ಜತೆಗೆ ದೇಶದಲ್ಲೇ ಅತಿ ಹೆಚ್ಚುಪರೀಕ್ಷೆಗಳು ಇಲ್ಲಿ ನಡೆಯುತ್ತಿದ್ದು, ಜತೆಗೆಅತ್ಯಧಿಕ ಸೋಂಕು ಪ್ರಕರಣಗಳೂ ವರದಿಯಾಗುತ್ತಿವೆ .ಮುಂದಿನ ದಿನಗಳಲ್ಲಿ ಇದು ಸೃಷ್ಟಿಸಲಿರುವ ವೈದ್ಯಕೀಯ ಮೂಲ ಸೌಕರ್ಯಗಳ ಬೇಡಿಕೆಯು ಸರ್ಕಾರದ ನಿದ್ದೆಗೆಡಿಸಿದೆ.
Related Articles
Advertisement
ಸಮಸ್ಯೆ ಆಗದು: ದಿನದಲ್ಲಿ ವರದಿಯಾಗುವ ಕೋವಿಡ್ ಸೋಂಕಿತರ ಪೈಕಿ ಶೇ.13ರಷ್ಟು ಮಂದಿಗೆ ಮಾತ್ರ ಐಸಿಯು ಹಾಸಿಗೆ ಅಗತ್ಯವಿರುತ್ತದೆ. ಆ ಪೈಕಿ ಶೇ.5 ಮಂದಿಗೆ ವೆಂಟಿಲೇಟರ್ ಶೇ.8 ಮಂದಿ ತೀವ್ರ ಅವಲಂಬಿತ ಘಟಕದಲ್ಲಿ (ಎಚ್‌ಡಿಯು) ಆಕ್ಸಿಜನ್ ಸೌಲಭ್ಯ ಒಳಗೊಂಡ ಚಿಕಿತ್ಸೆ ಬೇಕಾಗುತ್ತದೆ. ಸದ್ಯಸರಾಸರಿ ನಾಲ್ಕು ಪ್ರಕರಣಗಳ ವರದಿಯಾದರೆ 200 ಮಂದಿಗೆ ವೆಂಟಿಲೇಟರ್‌ಅಗತ್ಯವಿರುತ್ತದೆ. ಉಳಿದಂತೆ ಸುಮಾರು 300 ಮಂದಿಗೆ ಎಚ್‌ಡಿಯು ಹಾಸಿಗೆಬೇಕಾಗುತ್ತದೆ. ಈಗಾಗಲೇ ಇಷ್ಟು ಪ್ರಮಾಣದಲ್ಲಿ ವೆಂಟಿಲೇಟರ್ ಮತ್ತು ಹಾಸಿಗೆಗಳು ಲಭ್ಯವಿವೆ. ಒಂದೇ ದಿನ ಐದು ಸಾವಿರ ಮಂದಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದು ಬಿಬಿಎಂಪಿ ವ್ಯಾಪ್ತಿ ಕೋವಿಡ್ ರೋಗಿಗಳ ಸ್ಥಳಾಂತರ ಸಮಿತಿ ಅಧ್ಯಕ್ಷ ತುಷಾರ್ ಗಿರಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರೀಕ್ಷೆ ಇನ್ನಷ್ಟು ಹೆಚ್ಚಳವಾಗಿ ನಿತ್ಯ ಪ್ರಕರಣಗಳು ಒಂದು ವೇಳೆ ಆರು ಸಾವಿರಕ್ಕೂ ಅಧಿಕವಾದರೂ ನಿರ್ವಹಣೆ ಅಗತ್ಯ ವ್ಯವಸ್ಥೆ ಮಾಡಲಾ ಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 100 ವೆಂಟಿಲೇಟರ್‌ಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 150 ವೆಂಟಿಲೇಟರ್‌ಗಳ ಅಳವಡಿಸಲು ಕ್ರಮಕೈಗೊಂಡಿದ್ದು, ಅಕ್ಟೋಬರ್ ಅಂತ್ಯಕ್ಕೆ 250 ವೆಂಟಿಲೇರ್‌ಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಜತೆಗೆ ಸಾಮಾನ್ಯ ಹಾಸಿಗೆ ಸಾಮರ್ಥ್ಯವನ್ನು ಕಡಿಮೆ ಮಾಡಿ ಆಕ್ಸಿಜನ್ ಹಾಸಿಗೆಗಳನ್ನು ಶೇ.40 ರಷ್ಟು ಹೆಚ್ಚಿಸಲಾಗು ವುದು. ಅಲ್ಲದೆ, 100ಕ್ಕೂ ಹೆಚ್ಚು ಹಾಸಿಗೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡುವ ನಿಟ್ಟಿನಲ್ಲಿ ಶೀಘ್ರ ಮಾತುಕತೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 10 ಲಕ್ಷ ಗಡಿದಾಟುವ ಪ್ರಕರಣ : ರಾಜ್ಯದಲ್ಲಿ ಅ. 12ರೊಳಗೆ ಸೋಂಕು ಪ್ರಕರಣಗಳ ಸಂಖ್ಯೆ ಏಳು ಲಕ್ಷ ಗಡಿದಾಟುತ್ತದೆ ಎಂದು ಈ ಹಿಂದೆ ಜೀವನ್ ರಕ್ಷಾ ಸಂಸ್ಥೆಯ ಸಮೀಕ್ಷೆ ಮೂಲಕಹೇಳಿತ್ತು. ಆದರೆ, ಅ.11ಕ್ಕೆ ಪ್ರಕರಣಗಳು ಏಳು ಲಕ್ಷ ದಾಟಿದ್ದವು. ಸದ್ಯ ನ.12ಕ್ಕೆ ಒಟ್ಟಾರೆ ಪ್ರಕರಣಗಳು 10ಲಕ್ಷ ಗಡಿದಾಟಲಿವೆ ಎಂದು ಅಂದಾಜಿಸಿದೆ.ಆ ವೇಳೆಗೆ ರಾಜ್ಯಕ್ಕೆ 22,5000 ಆಕ್ಸಿಜನ್ ಬೆಡ್ ಹಾಸಿಗೆಗಳು, 16,800 ಐಸಿಯು ಹಾಸಿಗೆಗಳು, 11,200 ವೆಂಟಿಲೇಟರ್ಗಳು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
– ಜಯಪ್ರಕಾಶ್ ಬಿರಾದಾರ್