Advertisement

ಮಾಧ್ಯಮಕ್ಕೆ ಪ್ರಜಾಪ್ರಭುತ್ವ ಪ್ರಶ್ನಿಸುವ ಶಕ್ತಿಯಿದೆ: ಪಿ.ಎಲ್‌. ಧರ್ಮ

09:23 PM Jul 01, 2019 | Team Udayavani |

ಉಡುಪಿ: ಆಧುನಿಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಬಲಿಷ್ಠ ಶಕ್ತಿಯಾಗಿ ಮಾಧ್ಯಮಗಳು ಕೆಲಸ ಮಾಡುತ್ತಿವೆ ಎಂದು ಮಂಗಳೂರು ವಿವಿ ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್‌. ಧರ್ಮ ಅಭಿಪ್ರಾಯಪಟ್ಟರು.

Advertisement

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರಸ್‌ ಕ್ಲಬ್‌ ಸಹಯೋಗದಲ್ಲಿ ಸೋಮವಾರ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಶ್ನಿಸುವುದು ಮುಖ್ಯ
ಪತ್ರಕರ್ತರು ಮೂಲಭೂತ ಪ್ರಶ್ನೆ ಕೇಳುವುದರಿಂದಲೇ ದೇಶದಲ್ಲಿ ಒಂದು ವ್ಯವಸ್ಥೆಯಿದೆ. ಇಲ್ಲದಿದ್ದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಒಬ್ಬ ವ್ಯಕ್ತಿ ಪತ್ರಿಕೆಯಲ್ಲಿ ತನ್ನ ಹೆಸರು ಬರಬಾರದೆಂದು ಭಯಪಡುತ್ತಾನೆಂದರೆ ಅದಕ್ಕೆ ಪತ್ರಕರ್ತರು ಕೇಳುವ ಮೂಲಭೂತವಾದ ಪ್ರಶ್ನೆಗಳು ಕಾರಣ. ಇದರಿಂದಾಗಿ ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆ ಸೇರಿದಂತೆ ಸರಕಾರಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸರಕಾರಿ ಹುದ್ದೆಗೆ ಪ್ರಯತ್ನಿಸಿ
ಯುವ ಜನರು ಸರಕಾರಿ ಹುದ್ದೆಗಳ ಕಡೆ ಗಮನ ಹರಿಸಬೇಕು. ತಹಶೀಲ್ದಾರ್‌, ಐಎಎಸ್‌ ಅಧಿಕಾರಿಗಳಾಗುವ ಗುರಿಯನ್ನು ಹೊಂದಿ.ಆ ಮೂಲಕ ಸಮಾಜದಲ್ಲಿ ಅನುಕೂಲವಿಲ್ಲದ ವ್ಯಕ್ತಿಗಳ ಬಗ್ಗೆ ಕಾಳಜಿಯನ್ನು ತೋರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಕುಲ್‌ ದಾಸ್‌ ಪೈ, ಹಾಗೂ ರಾಜ್ಯ ಸಂಘದ ವಾರ್ಷಿಕ ಪ್ರಶಸ್ತಿ ವಿಜೇತ ಲಕ್ಷ್ಮೀ ಮಚ್ಚಿನ ಹಾಗೂ ಪತ್ರಿಕಾ ವಿತರಕ ಮಹಮ್ಮದ್‌ ಇಸ್ಮಾಯಿಲ್‌, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು ಅಧ್ಯಕ್ಷತೆ ವಹಿಸಿದರು. ಮೈಸೂರು ಹಿರಿಯ ಛಾಯಾಚಿತ್ರ ಗ್ರಾಹಕ ಜಿ.ಕೆ. ಹೆಗ್ಡೆ, ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಪ್ರಧಾನ ವ್ಯವಸ್ತಾಪಕ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಮಿತಿ ಸದಸ್ಯ ಕಿರಣ್‌ ಮಂಜನಬೈಲು, ಪ್ರಸ್‌ ಕ್ಲಬ್‌ ಸಂಚಾಲಕ ನಾಗರಾಜ್‌ ರಾವ್‌, ಕೋಶಾಧಿಕಾರಿ ದಿವಾಕರ್‌ ಹಿರಿಯಡಕ
ಉಪಸ್ಥಿತರಿದ್ದರು.

ಮೈಕಲ್‌ ರೋಡ್ರಿಗಸ್‌ ಸ್ವಾಗತಿಸಿದರು, ಜಿಲ್ಲಾ ಸಂಘದ ಪ್ರ.ಕಾರ್ಯದರ್ಶಿ ಸಂತೋಷ್‌ ಸರಳೆಬೆಟ್ಟು ವಂದಿಸಿದರು. ಚೇತನ್‌ ಕಾರ್ಯಕ್ರಮ ನಿರ್ವಹಿಸಿದರು.ಮಂಗಳೂರು ವಿವಿ ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್‌. ಧರ್ಮ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next