ಕಲಬುರಗಿ: ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಬುಧವಾರ ಬಿರುಸಿನ ಪ್ರಚಾರದ ನಡುವೆಯೂ ಎಂ.ಡಿ ಪರೀಕ್ಷೆಗೆ ಹಾಜರಾದರು.
ಎಂಬಿಬಿಎಸ್ ಪದವಿ ಪೂರೈಸಿರುವ ಡಾ| ಅವಿನಾಶ, ನಗರದ ಹೈದ್ರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9 ಗಂಟೆಗೆ ಹಾಜರಾಗಿ ಎಂ.ಡಿ (ಮೆಡಿಸನ್) ವ್ಯಾಸಂಗ ಮುಂದುವರಿಸಲು ಪರೀಕ್ಷೆ ಬರೆದರು.
ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಬಂದ ಸಹಪಾಠಿಗಳೊಂದಿಗೆ ಕೆಲ ಕಾಲ ಬೆರೆತರು. ಕಾಲೇಜು ಬ್ಯಾಗ್‌ನೊಂದಿಗೆ ಬಂದ ಅವರು, ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ಭದ್ರತಾ ಸಿಬ್ಬಂದಿ ಅವರನ್ನು ಪರಿಶೀಲಿಸಿ ಒಳಬಿಟ್ಟರು.
ಪರೀಕ್ಷೆ ಬರೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಾ| ಅವಿನಾಶ ಜಾಧವ, ಚುನಾವಣಾ ಒತ್ತಡದ ನಡುವೆಯೂ ಪರೀಕ್ಷೆ ಬರೆದಿದ್ದೇನೆ. ಇನ್ನೂ ಮೂರು ಪೇಪರ್‌ಗಳು ಬಾಕಿ ಇವೆ.
ಆದರೆ, ಅವುಗಳಿಗೆ ಹಾಜರಾಗಲು ಆಗೋಲ್ಲ. ಮುಂದೆ ಉಳಿದ ಮೂರು ಪೇಪರ್‌ಗಳನ್ನು ಬರೆಯುತ್ತೇನೆ. ಲೋಕಸಭೆ-ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿದ್ದರಿಂದ ಸರಿಯಾಗಿ ಓದಲು ಆಗಲಿಲ್ಲ ಎಂದರು.