Advertisement

ಮಠ-ರಾಜಕೀಯ ಸೇವೆ ಎರಡನ್ನೂ ನಿಭಾಯಿಸುವೆ

11:39 PM Nov 18, 2019 | Lakshmi GovindaRaj |

ಹಿರೇಕೆರೂರು: “ಚುನಾವಣೆಗೆ ಸ್ಪ ರ್ಧಿಸುವ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಜನರ ಮುಂದೆ ಹೋಗುತ್ತೇನೆ. ನನ್ನ ಸೇವೆ ಜನರಿಗೆ ಅವಶ್ಯವಿದ್ದರೆ ಬಳಸಿಕೊಳ್ಳಲಿ’ ಎಂದು ಜೆಡಿಎಸ್‌ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ರಟ್ಟಿಹಳ್ಳಿಯ ಕಂಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು.

Advertisement

ಉಮೇದುವಾರಿಕೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ಸೋಲಿನ ಭಯದಿಂದಲೇ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಯು.ಬಿ.ಬಣಕಾರ ಅವರನ್ನು ನನ್ನ ಮನವೊಲಿಸಲು ಕಳುಹಿಸಿದ್ದರು. ನಾನು ಯಾರ ಬಗ್ಗೆಯೂ ಹೆಚ್ಚು ಮಾತನಾಡಲ್ಲ, ಮಠ-ರಾಜಕೀಯ ಸೇವೆ ಎರಡನ್ನೂ ನಿಭಾಯಿಸುತ್ತೇನೆ ಎಂದರು.

ಭಕ್ತರ ಒತ್ತಡ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪ ರ್ಧಿಸಲು ಇಚ್ಛಿಸಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕು ಸಮಗ್ರವಾಗಿ ಅಭಿವೃದ್ಧಿಯಾಗಬೇಕಿದೆ. ರಾಜಕೀಯ ಎಂಬುದು ಸಹ ಒಂದು ಸೇವೆ. ನಮ್ಮ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್‌ ಟಿಕೆಟ್‌ ಕೊಟ್ಟಿದೆ. ಆಟ ಆಡುವವರೆಗೆ ಮಾತ್ರ ಸ್ಪಧಿಗಳು ಹೊಡೆದಾಡುತ್ತಾರೆ. ಆಟ ಮುಗಿದ ಬಳಿಕ ಎಲ್ಲರೂ ಒಂದೇ. ಅದೇ ರೀತಿ ಚುನಾವಣೆ ಮುಗಿದ ಬಳಿಕ ಸೋಲಲಿ, ಗೆಲ್ಲಲಿ ಎಲ್ಲರೂ ಒಂದೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next