Advertisement

ಜನಸಾಮಾನ್ಯರಿಗೆ ಕಾನೂನು ಅರಿವು ಅಗತ್ಯ

05:01 PM Sep 16, 2018 | Team Udayavani |

ಬಳ್ಳಾರಿ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಕಾನೂನು ಸಾಕ್ಷರತಾ ರಥಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಿರುವ ಈ ಕಾನೂನು ಸಾಕ್ಷರತಾ ರಥಯಾತ್ರೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ಬಿರಾದಾರ್‌ ಹಸಿರು ನಿಶಾನೆ ತೋರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನೂನು ಸಾಕ್ಷರತಾ ರಥಯಾತ್ರೆಯು ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಜನಸಾಮಾನ್ಯರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಅರಿವು ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ತಿಳಿಸಿದರು.

ನ್ಯಾಯಾಧೀಶರು, ವಕೀಲರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಈ ಸಾಕ್ಷರತಾ ರಥಯಾತ್ರೆಯೊಂದಿಗೆ ಪಾಲ್ಗೊಂಡು ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಸೇರಿದಂತೆ ವಿವಿಧ ಸಮುದಾಯಗಳ ಜನರಿಗೆ ತಮಗೆ ಲಭ್ಯವಿರುವ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ತಿಳಿಹೇಳುವ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಕಾನೂನು ಸಾಕ್ಷರತಾ ರಥಯಾತ್ರೆ ಸೆ.15 ರಂದು ಜಿಲ್ಲೆಯ ಹೊಸಮೋಕಾದ ಕಾಲೇಜು ಮೈದಾನ, ಚೆಳ್ಳಗುರ್ಕಿಯ ಎರ್ರಿತಾತಾ ದೇವಸ್ಥಾನ ಆವರಣ, ರೂಪನಗುಡಿಯ ಗ್ರಾಪಂ ಆವರಣ, ಸೆ.16ರಂದು ಸೋಮಸಮುದ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಕೋಳೂರದ ರಾಮಲಿಂಗೇಶ್ವರ ದೇವಸ್ಥಾನ ಆವರಣ, ಬೈಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಸೆ.17ರಂದು ಹಂದಿಹಾಳ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಕೊರ್ಲಗುಂದಿಯ ಗ್ರಾಪಂ ಆವರಣ, ಶ್ರೀಧರಗಡ್ಡೆಯ ಸರಕಾರಿ ಪ್ರೌಢಶಾಲೆ ಆವರಣ, ಸೆ.18ರಂದು ಕೊಳಗಲ್ಲುವಿನ ಎರ್ರಿತಾತ ದೇವಸ್ಥಾನ ಆವರಣ, ಸಂಗನಕಲ್ಲು ಗ್ರಾಪಂ ಆವರಣ, ಸಿಂದಿಗೇರಿಯ ಸರಕಾರಿ ಪ್ರೌಢಶಾಲೆಯ
ಆವರಣದಲ್ಲಿ ವಿವಿಧ ರೀತಿಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಏರ್ಪಡಿಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಖಾಸಿಂ ಚೂರಿಖಾನ್‌, ಕಾತ್ಯಾಯಿನಿ, ಸಿ.ಆರ್‌. ಸೋಮಶೇಖರ್‌, ವಿಪುಲ ಪೂಜಾರ, ಎಸ್‌ .ಬಿ.ಹಂದ್ರಾಳ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್‌.ಬದರಿನಾಥ್‌, ತಾಪಂ ಅಧ್ಯಕ್ಷೆ ರಮೀಜಾ ಬಿ, ತಹಶೀಲ್ದಾರ್‌ ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಉಷಾ, ತಾಪಂ ಇಒ ಜಾನಕಿರಾಮ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಜಿ.ಎಂ.ರವಿರಾಜಶೇಖರರೆಡ್ಡಿ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮೌನೇಶ ಸೇರಿದಂತೆ ವಕೀಲರು,ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 

Advertisement

ಸೆ.16ರಂದು ಸೋಮಸಮುದ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಕೋಳೂರದ ರಾಮಲಿಂಗೇಶ್ವರ ದೇವಸ್ಥಾನ ಆವರಣ, ಬೈಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಸೆ.17ರಂದು ಹಂದಿಹಾಳ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಕೊರ್ಲಗುಂದಿಯ ಗ್ರಾಪಂ ಆವರಣ, ಶ್ರೀಧರಗಡ್ಡೆಯ ಸರಕಾರಿ ಪ್ರೌಢಶಾಲೆ ಆವರಣ, ಸೆ.18ರಂದು ಕೊಳಗಲ್ಲುವಿನ ಎರ್ರಿತಾತ ದೇವಸ್ಥಾನ ಆವರಣ, ಸಂಗನಕಲ್ಲು ಗ್ರಾಪಂ ಆವರಣ, ಸಿಂದಿಗೇರಿಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next