Advertisement

ಹುತಾತ್ಮ ಯೋಧ ಬಳಬಟ್ಟಿ ಅಂತ್ಯಕ್ರಿಯೆ

12:29 AM May 25, 2019 | Lakshmi GovindaRaj |

ಆಲಮಟ್ಟಿ: ಆರ್‌ಡಿಎಕ್ಸ್‌ ಬಳಕೆ ಹಾಗೂ ಸ್ಫೋಟ ತಪ್ಪಿಸುವ ಬಗ್ಗೆ ತರಬೇತಿ ನೀಡುವಾಗ ಅವಘಡ ಸಂಭವಿಸಿ ಹುತಾತ್ಮರಾದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದ ಸೈನಿಕ ಶ್ರೀಶೈಲ ರಾಯಪ್ಪ ತೋಳಮಟ್ಟಿ (34)ಯವರ ಅಂತ್ಯಸಂಸ್ಕಾರ ಶುಕ್ರವಾರ ಸ್ವಗ್ರಾಮ ಬಳಬಟ್ಟಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Advertisement

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬುಧವಾರ ಸೇನೆಯ ಮದ್ರಾಸ್‌ ರೆಜಿಮೆಂಟಿನ 12ನೇ ರೆಜಿಮೆಂಟಿನಲ್ಲಿ ಕಿರಿಯ ಸೈನಿಕರಿಗೆ ತರಬೇತಿ ನೀಡುವಾಗ ಸ್ಫೋಟ ಸಂಭವಿಸಿ ಅವರು ಹುತಾತ್ಮರಾಗಿದ್ದರು. ಪಾರ್ಥಿವ ಶರೀರವನ್ನು ಶುಕ್ರವಾರ ಬಳಬಟ್ಟಿ ಗ್ರಾಮಕ್ಕೆ ತರಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next