Advertisement
ಸರ್ವೆ ಗ್ರಾಮದ ಭಕ್ತಕೋಡಿಯ ಕಲ್ಲಗುಡ್ಡೆಯ ಹರೀಶ ಅವರ ಪತ್ನಿ ದೀಪಿಕಾ (23) ನಾಪತ್ತೆಯಾದವರು. ಜೂ.13ರಂದು ಮನೆಯಿಂದ ಕಾಣೆಯಾಗಿದ್ದು ಮನೆಯ ಸುತ್ತ ಮುತ್ತಲ ಪರಿಸರ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೂರು ತಿಂಗಳ ಹಿಂದೆ ಕಡಬದ ಕರ್ಮಾಯಿ ನಿವಾಸಿ ಪ್ರಶಾಂತ್ ಜತೆಗೆ ಹೋಗಿದ್ದ ದೀಪಿಕಾ ಅವರನ್ನು ಮಂಗಳೂರಿನಲ್ಲಿ ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬರಲಾಗಿತ್ತು. ಈ ಬಾರಿಯೂ ಪ್ರಶಾಂತ್ ಜತೆ ತೆರಳಿರುವ ಬಗ್ಗೆ ಸಂಶಯವಿದೆ ಎಂದು ಹರೀಶ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.