Advertisement

Sagara: ನ್ಯಾಯಾಲಯದ ಆದೇಶವನ್ನೇ ತಿರುಚಿದ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ; ಪ್ರತಿಭಟನೆ

04:24 PM Nov 24, 2023 | Team Udayavani |

ಸಾಗರ: ಇಲ್ಲಿನ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ನ್ಯಾಯಾಲಯದ ಆದೇಶವನ್ನು ಭಕ್ತರಿಗೆ ತಪ್ಪಾಗಿ ಬಿಂಬಿಸಿರುವುದು ಮತ್ತು ಅಧಿಕಾರಕ್ಕೆ ಅಂಟಿ ಕುಳಿತಿರುವ ಧೋರಣೆಯನ್ನು ಖಂಡಿಸಿ ಶುಕ್ರವಾರ ಮಾರಿಕಾಂಬಾ ಹಿತರಕ್ಷಣಾ ಸಮಿತಿ ವತಿಯಿಂದ ಮಾರಿಕಾಂಬಾ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಸಮಿತಿ ಸಂಚಾಲಕ ಎಂ.ಡಿ.ಆನಂದ್ ಮಾತನಾಡಿ, ಐದರಿಂದ ಆರು ಜಾತ್ರೆ ಮಾಡಿರುವ ಹಾಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧಿಕಾರ ಬಿಟ್ಟು ಕೆಳಗೆ ಇಳಿಯುವಂತೆ ಕಾಣುತ್ತಿಲ್ಲ. ಸಮಿತಿಯ ಮೇಲೆ ದೊಡ್ಡಮಟ್ಟದ ಭ್ರಷ್ಟಾಚಾರದ ಆರೋಪ ಇದೆ. ಪ್ರತಿ ಜಾತ್ರೆ ನಂತರ ಹೊಸ ಸಮಿತಿ ರಚನೆ ಮಾಡಬೇಕು ಎನ್ನುವ ನಿಯಮವಿದ್ದರೂ ಅದನ್ನು ಮೀರಿ ಆಡಳಿತ ನಡೆಸುತ್ತಿದ್ದಾರೆ. ದೇವಸ್ಥಾನದ ಹಣವನ್ನು ಲೂಟಿ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸರ್ವಸದಸ್ಯರ ಸಭೆ ಕರೆದು ನ್ಯಾಯಾಲಯದ ಆದೇಶವಾಗಿದೆ ಎಂದು ಸುಳ್ಳು ಹೇಳಿ ಸಭೆಯನ್ನು ದಿಢೀರ್ ಮುಂದೂಡಿದ್ದಾರೆ. ಸಮಿತಿ ತಕ್ಷಣ ಸರ್ವಸದಸ್ಯರ ಸಭೆ ಕರೆದು ಅಧಿಕಾರ ಬಿಟ್ಟು ಕೆಳಗೆ ಇಳಿಯದೆ ಹೋದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಮನೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಪ್ರಮುಖರಾದ ಎನ್.ಶ್ರೀನಾಥ್ ಮಾತನಾಡಿ, ನ. 19ರಂದು ಸಮಿತಿ ಸರ್ವಸದಸ್ಯರ ಸಭೆ ಕರೆದಿದ್ದು ಏಕಾಏಕಿ ಸಭೆ ಮುಂದೂಡಿರುವ ಕ್ರಮ ಅನುಮಾನಕ್ಕೆ ಎಡೆಮಾಡಿ ಕೊಡುತ್ತಿದೆ. ಸಮಿತಿ ಮೇಲೆ ಸಾಕಷ್ಟು ಆರೋಪಗಳಿವೆ. ತಕ್ಷಣ ಸರ್ವಸದಸ್ಯರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಸಮಿತಿ ಪ್ರಮುಖರಾದ ರಾಮಣ್ಣ ಟಿ., ರಘುನಾಥ್, ಗುರುಬಸವನಗೌಡ, ಡಿಶ್ ಗೋಪಾಲ, ಜನಾರ್ದನ ಆಚಾರಿ, ನಿತ್ಯಾನಂದ ಶೆಟ್ಟಿ, ಸದಾನಂದ್, ಈಶ್ವರ, ಶ್ರೀಧರ್ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Watch: ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ…97 ವರ್ಷದ ಅಜ್ಜಿಯ ಪ್ಯಾರಾಗ್ಲೈಡಿಂಗ್‌ ಸಾಹಸ!

Advertisement
Advertisement

Udayavani is now on Telegram. Click here to join our channel and stay updated with the latest news.

Next