Advertisement

ರಾಜ್ಯಪಾಲರನ್ನು ಬಿಟ್ಟು ತೆರಳಿದ್ದ ವಿಮಾನದ ವ್ಯವಸ್ಥಾಪಕ ವಜಾ

10:39 PM Jul 31, 2023 | Team Udayavani |

ಹೊಸದಿಲ್ಲಿ: ಕಳೆದ ವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಕರ್ನಾಟಕ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರನ್ನು ಬಿಟ್ಟು ಎಐಎಕ್ಸ್‌ ಕನೆಕ್ಟ್ ವಿಮಾನ ಗಗನಕ್ಕೇರಿತ್ತು. ಈ ಸಂಬಂಧ ಕರ್ತವ್ಯದಲ್ಲಿದ್ದ ವ್ಯವಸ್ಥಾಪಕರನ್ನು ಆಗಲೇ ಕೆಲಸದಿಂದ ಕಿತ್ತು ಹಾಕಲಾಗಿದೆ, ತನಿಖೆ ಮುಂದುವರಿದಿದೆ ಎಂದು ಎಐಎಕ್ಸ್‌ ಮೂಲಗಳು ಹೇಳಿವೆ.

Advertisement

ಸೋಮವಾರ ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿಯಾದ ಎಐಎಕ್ಸ್‌ ಕನೆಕ್ಟ್ ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ. ಜತೆಗೆ ಕ್ಷಮೆ ಯಾಚಿಸಿ, ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜು.27ರಂದು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಎಐಎಕ್ಸ್‌ ಕನೆಕ್ಟ್ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣಿಸುವವರಿದ್ದರು. ಆದರೆ ಬರುವುದು ಸ್ವಲ್ಪ ತಡವಾದ ಕಾರಣ ಅವರನ್ನು ಬಿಟ್ಟೇ ವಿಮಾನ ಹಾರಿತ್ತು.

ಪರಿಣಾಮ ರಾಜ್ಯಪಾಲರ ಕಚೇರಿಯಿಂದ ಅಧಿಕೃತವಾಗಿ ದೂರು ದಾಖಲಾಗಿತ್ತು. ಎಐಎಕ್ಸ್‌ ಕನೆಕ್ಟ್ ವಿಮಾನವನ್ನು ಹಿಂದೆ ಏರ್‌ಏಷ್ಯಾ ಎಂದು ಕರೆಯಲಾಗುತ್ತಿತ್ತು. ಅದು ಏರ್‌ ಇಂಡಿಯಾ ಸಮೂಹದ ಒಂದು ಭಾಗವೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next