ಶಮ್ಲಿ (ಉತ್ತರ ಪ್ರದೇಶ) : ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಚಿತ್ರ ವಿಚಿತ್ರವಾದ ದೂರುಗಳು ದಾಖಲಾಗುತ್ತಿವೆ. ಇದೇ ಗುಂಪಿಗೆ ಸೇರಿದ ವಿಶೇಷ ಪ್ರಕರಣವೊಂದು ಉತ್ತರ ಪ್ರದೇಶದ ಶಮ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಹಿಂದೆ ಒಮ್ಮೆ ನಾಯಿಯ ಡಿ ಎನ್ ಎ ಪರೀಕ್ಷೆ ಮಾಡಿಸುವಂತೆ ಕೋರಿ ಮಾಲೀಕರೊಬ್ಬರು ಪೊಲೀಸರಿಗೆ ಪತ್ರ ಬರೆದಿದ್ದರು. ಆದ್ರೆ ಇದೀಗ ಎಮ್ಮೆಯ ಮಾಲೀಕರೊಬ್ಬರು ತನ್ನ ಎಮ್ಮೆಯ ಮಲೀಕತ್ವವನ್ನು ಪಡೆಯಬೇಕಾಗಿ ಡಿ ಎನ್ ಎ ಪರೀಕ್ಷೆ ಮಾಡಿಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಹೌದು, ಶಮ್ಲಿ ಪ್ರದೇಶದ ಚಂದ್ರಪಾಲ್ ಸಿಂಗ್ ಎಂಬುವವರ ಎಮ್ಮೆಯು ಕಳೆದ ಆರು ತಿಂಗಳ ಹಿಂದೆ ಕಳ್ಳತನವಾಗಿತ್ತು. ಈ ಬಗ್ಗೆ ಚಂದ್ರಪಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿರಲಿಲ್ಲ.
ತನ್ನ ‘ಗುಡ್ಡು’ ಹೆಸರಿನ ಎಮ್ಮೆ ಕಳೆದುಕೊಂಡ ಚಂದ್ರಪಾಲ್ ಸ್ವಪ್ರಯತ್ನದಿಂದ ಎಮ್ಮೆಯನ್ನು ಹುಡುಕಿಕೊಂಡಿದ್ದಾರೆ. ಸಹರಾಂಪುರ ಪ್ರದೇಶದ ಶೆಡ್ ನಲ್ಲಿ ಎಮ್ಮೆ ಇರುವುದಾಗಿ ತಿಳಿದು ಎಮ್ಮೆಯನ್ನು ಮನೆಗ ಕರೆತಂದಿದ್ದಾರೆ.
ಆದ್ರೆ ಇದೇ ನನ್ನ ಎಮ್ಮೆ ಎಂದು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಎಮ್ಮೆಯ ಡಿ ಎನ್ ಎ ಪರೀಕ್ಷೆ ಮಾಡಿಸಬೇಕು ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ತಿಳಿಸಿದ್ದು, ಗುಡ್ಡು ಮತ್ತು ನಮ್ಮ ಮನೆಯಲ್ಲಿನ ಮತ್ತೊಂದು ಎಮ್ಮೆಯ ಡಿ ಎನ್ ಎ ಪರೀಕ್ಷೆ ಮಾಡಬೇಕು ಎಂದಿದ್ದಾರೆ. ಈ ಬಗ್ಗೆ ಆರೋಪಿಸಿರುವ ಅವರು ನನ್ನ ದೂರನ್ನು “ಸುಳ್ಳು” ಎಂದು ಪರಿಗಣಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.