ಬನಹಟ್ಟಿ: ಕೋವಿಡ್ ಮತ್ತು ಬ್ಲ್ಯಾಕ್ ಫಂಗಸ್ ವಿರುದ್ದ ಹೋರಾಡಿ ಗೆದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದಲ್ಲಿ ನಡೆದಿದೆ.
ಮೃತವ್ಯಕ್ತಿಯನ್ನು ಹಣಗಂಡಿ ಗ್ರಾಮದ ದೇಸಾಯಿ ಮನೆತನದ ಸಾಗರ ದಾದಾಸಾಹೇಬ ದೇಸಾಯಿ(45) ಎಂದು ಗುರುತಿಸಲಾಗಿದೆ.
ಕೋವಿಡ್ ನಿಂದ ನರಳಾಡಿ ಕೊನೆಗೂ ಗುಣಮುಖರಾಗಿ ಚೇತರಿಕೆ ಹೊಂದುವಷ್ಟರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ವಿಶೇಷವೆಂದರೆ ಮಹಾರಾಷ್ಟ್ರದ ಸಾಂಗಲಿಯ ಖಾಸಗಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ವಿರುದ್ಧ ಹೋರಾಡಿ ಚಿಕಿತ್ಸೆ ಸಂಪೂರ್ಣ ಫಲಿಸಿದ ಕಾರಣ ಕಳೆದ ಮೂರು-ನಾಲ್ಕು ದಿನಗಳಿಂದ ಮನೆಯಲ್ಲಿದ್ದರು.
ಇದನ್ನೂ ಓದಿ: ಟ್ರೆಂಡಿಂಗ್: ಫ್ರೊಫೆಸರ್ ಆಗಿ ಬದಲಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಮಂಗಳವಾರ ಬೆಳಗಿನ ಜಾವ ವಾಯು ವಿಹಾರ ಮುಗಿಸಿಕೊಂಡು ಮನೆಯಲ್ಲಿರುವಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬ್ಲ್ಯಾಕ್ ಫಂಗಸ್‌ನಿಂದ ಪಾರಾಗಿದ್ದರೂ ನಂತರದ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿರುವದು ವಿಚಿತ್ರವಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
ಇದನ್ನೂ ಓದಿ: ಸೋಂಕು ಭಾರೀ ಇಳಿಕೆ : ರಾಜ್ಯ, ದೇಶದಲ್ಲಿ ತಗ್ಗುತ್ತಿರುವ ಕೋವಿಡ್ ಅಲೆ