ಕ್ರಿ.ಪೂ. 525 ಜನಿಸಿದ ಗ್ರೀಕ್ ನಾಟಕಕಾರ ಏಸ್ಕೈಲಸ್ “ದುರಂತ ನಾಟಕಕಾರ’ ಎಂದೇ ಪ್ರಖ್ಯಾತಿ ಗಳಿಸಿದ್ದ. ಏಕೆಂದರೆ ಅವನ ನಾಟಕಗಳಲ್ಲಿ ಬಹುತೇಕವು ದುರಂತಮಯ ಅಂತ್ಯವನ್ನು ಹೊಂದಿರುತ್ತಿತ್ತು. ಅಲ್ಲದೆ ನಾಟಕದ ಕಥೆಯೂ ದುಃಖಭರಿತವಾಗಿರುತ್ತಿತ್ತು. ಆತನ ಪ್ರತಿಭೆಯನ್ನು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲನೇ ಮೆಚ್ಚಿಕೊಂಡಿದ್ದ. ಇಂತಿಪ್ಪ ಏಸ್ಕೈಲಸ್‌ನ ಅಂತ್ಯವೂ ಅಷ್ಟೇ ನಾಟಕೀಯವಾಗಿ ಕೊನೆಗೊಂಡಿದ್ದು ವಿಪರ್ಯಾಸ. ಅದು ಎಷ್ಟು ನಾಟಕೀಯವಾಗಿದೆಯೋ, ಅಷ್ಟೇ ಹಾಸ್ಯಾಸ್ಪದವೂ ಆಗಿದೆ. ಸಿಸಿಲಿ ನಗರಕ್ಕೆ ಬಂದಿದ್ದಾಗ ಆತ ಬಯಲು ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಅದೇ ಸಮಯದಲ್ಲಿ ಗಿಡುಗವೊಂದು ಅದೆಲ್ಲಿಂದಲೋ ಆಮೆಯನ್ನು ಹಿಡಿದು ಹಾರಿಕೊಂಡು ಹೋಗುತ್ತಿತ್ತು. ಆಮೆಯ ಭಾರ ತಾಳಲಾರದೆ ಅದರ ಕಾಲುಗಳು ಜಗ್ಗತೊಡಗಿದವು. ತುಂಬಾ ಸಮಯ ಹಿಡಿದುಕೊಳ್ಳಲು ಆಗದೇ ಇದ್ದಾಗ ಗಿಡುಗ ಆಮೆಯನ್ನು ಸಡಿಲಿಸಿತು. ಏಸ್ಕೈಲಸ್‌ನ ದುರಾದೃಷ್ಟಕ್ಕೆ ಆತ ನಡೆದುಹೋಗುತ್ತಿದ್ದ ದಾರಿಯಲ್ಲೇ ಗಿಡುಗ ಆಮೆಯನ್ನು ಬೀಳಿಸಿತ್ತು. ಆಕಾಶದಿಂದ ಕೆಳಕ್ಕೆ ಬಿದ್ದ ಆಮೆ ನೇರವಾಗಿ ಏಸ್ಕೈಲಸ್‌ನ ತಲೆ ಮೇಲೆ ಬಿದ್ದು ಆತ ಮರಣವನ್ನಪ್ಪಿದ.
ಹವನ