Advertisement

ಅನ್‌ಲಾಕ್‌ ಆದ್ರೂ ಮಾಲ್‌ ಭಣ ಭಣ

06:21 AM Jun 15, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆ ಮಾಲ್‌ ಸೇರಿ ವಿವಿಧ ಮಳಿಗೆಗಳು ಆರಂಭವಾಗಿದ್ದರೂ ಜನರ ಓಡಾಟ ಮಾತ್ರ ವಿರಳವಾಗಿದೆ. ಇದು ವ್ಯಾಪಾರ ವಹಿವಾಟು ಮೇಲೆ ನೇರ ಪರಿಣಾಮ ಬೀರಿದೆ. ನಗರದ ಬೆರಳೆಣಿಕೆಯಷ್ಟು  ಮಾಲ್‌ಗ‌ಳಷ್ಟೇ ಗ್ರಾಹಕರು ಕಾಣುತ್ತಿದ್ದಾರೆ. ಉಳಿದ ಮಾಲ್‌ಗ‌ಳು ವಾರಾಂತ್ಯದಲ್ಲೂ ಗ್ರಾಹಕರಿಲ್ಲದೆ ಬಣಗುಡುತ್ತಿವೆ.

Advertisement

ವಸ್ತ್ರ, ಗೃಹೋಪಯೋಗಿ ವಸ್ತು, ಎಲೆಕ್ಟ್ರಾನಿಕ್‌ ಉಪಕರಣ, ಮಕ್ಕಳ ಆಟಿಕೆ ಇತರೆ ವಸ್ತುಗಳ ಖರೀದಿ ನೀರಸವಾಗಿದೆ. ಫೋರಂ ಮಾಲ್‌, ಗರುಡಾ ಮಾಲ್‌, ಒರಾಯನ್‌ ಮಾಲ್‌, ಸೆಂಟ್ರಲ್‌ ಮಾಲ್‌, ಮಂತ್ರಿ ಮಾಲ್‌ ಸೇರಿದಂತೆ ನಗರದ ಪ್ರಮುಖ ಮಾಲ್‌ ಗಳಿಗೆ ಹಿಂದೆಲ್ಲಾ ವಾರಾಂತ್ಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರು  ತ್ತಿದ್ದರು. ಆದರೆ,  ಲಾಕ್‌ಡೌನ್‌ನಿಂದಾಗಿ ಎರಡೂವರೆ ತಿಂಗಳಿನಿಂದ ಮಾಲ್‌ಗ‌ಳು ಬಂದ್‌ ಆಗಿದ್ದವು.

ಇದೀಗ ಪುನರಾರಂಭವಾದರೂ ಕೋವಿಡ್‌ 19 ಭೀತಿಯಿಂದ ಜನ ಮಾಲ್‌ಗ‌ಳತ್ತ ಸುಳಿಯುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನೀಡಿದ್ದ  ನಿರ್ದೇಶನಗಳನ್ನು ಪಾಲ್‌ಗ‌ಳು ಪಾಲಿಸುತ್ತಿವೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಲ್‌ನ ಪ್ರತಿ ಮಳಿಗೆಗೆ ಪ್ರವೇಶಿಸಬೇಕೆಂದರೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಆದರೂ, ಗ್ರಾಹಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ.

ಗ್ರಾಹಕರ ಹಿಂದೇಟು: ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ, ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಇನ್ನೊಂದೆಡೆ ಹೊಸ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವುದು ಗ್ರಾಹಕರ ಸಂಖ್ಯೆ ಕಡಿಮೆ ಇರುವುದಕ್ಕೆ  ಕಾರಣವಿದ್ದಂತಿದೆ. ಆತಂಕ ನಿವಾರಣೆಯಾಗಿ ಜನ ಯಾವಾಗ ಮಳಿಗೆಗಳತ್ತ ಬರುತ್ತಾರೆ ಎಂದು ಕಾಯುವಂತಾಗಿದೆ ಎಂದು ಬನ್ನೇರುಘಟ್ಟ ರಸ್ತೆಯ ಮಾಲ್‌ನ ಮಳಿಗೆದಾರರು ಹೇಳಿದರು.

ವಿದ್ಯಾರ್ಥಿಗಳ ಕೊರತೆ: ಮಾಲ್‌ಗ‌ಳ ಗ್ರಾಹಕರಲ್ಲಿ ವಿದ್ಯಾರ್ಥಿಗಳು ಶೇ. 20-25ರಷ್ಟಿರುತ್ತಿದ್ದರು. ಶಾಲಾ- ಕಾಲೇಜು ಆರಂಭ ವಾಗದ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಸಿನಿಮಾ ಮಂದಿ ರ ಗಳು ಮುಚ್ಚಿರುವುದು ಗ್ರಾಹಕರ ಸಂಖ್ಯೆ  ಕಡಿಮೆಗೆ ಕಾರಣವಾಗಿದೆ. ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದು, ದಿನ ಕಳೆದಂತೆ ಗ್ರಾಹಕರ ಸಂಖ್ಯೆ ಹೆಚ್ಚಾ  ಗುವ ನಿರೀಕ್ಷೆ ಇದೆ ಎಂದು ಮಾಲ್‌ ವ್ಯವ ಸ್ಥಾಪಕರೊಬ್ಬರು ತಿಳಿಸಿದರು.

Advertisement

ಆನ್‌ಲೈನ್‌ ಮೂಲಕ ವಸ್ತುಗಳ ಖರೀದಿ: ಲಾಕ್‌ಡೌನ್‌  ಸಡಿಲಿಕೆ ನಂತರ ಕೋವಿಡ್‌ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಮಾಲ್‌ಗ‌ಳಿಗೆ ತೆರಳದೇ ಆನ್‌ಲೈನ್‌ ಖರೀದಿ ಮೊರೆ ಹೋಗುತ್ತಿರುವುದ ಸಹ ಮಾಲ್‌ಗ‌ಳಿಗೆ ಗ್ರಾಹಕರ ಸಂಖ್ಯೆ ಇಳಿಕೆಗೆ  ಕಾರಣವಾಗಿದೆ ಎಂಬ ಮಾತಿದೆ.

ಒಳಾಂಗಣ ಕ್ರೀಡಾ ವಸ್ತುಗಳಿಗೆ ಬೇಡಿಕೆ: ಲಾಕ್‌ಡೌನ್‌ ಸಂದರ್ಭದಲ್ಲಿ ಜನ ಚೆಸ್‌, ಕೇರಂ ಇತರೆ ಒಳಾಂಗಣ ಆಟಗಳಲ್ಲಿ ತೊಡಗಿದ್ದರು. ಲಾಕ್‌ಡೌನ್‌ ಸಡಿಲಿಕೆ ನಂತರವೂ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಕ್ಕಳೊಂದಿಗೆ ಕ್ರೀಡಾ  ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಲಾಕ್‌ಡೌನ್‌ ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಒಳಾಂಗಣ ಕ್ರೀಡಾ ಪರಿಕರಗಳ ಬೇಡಿಕೆ ಶೇ. 30ರಷ್ಟು ಏರಿಕೆಯಾಗಿದೆ ಎಂದು ವಿಜಯನಗರದ ವ್ಯಾಪಾರಿ ಪ್ರಸಾದ್‌ ಎಂಬುವರು  ತಿಳಿಸಿದ್ದಾರೆ.

ಕೋವಿಡ್‌ 19 ಹಿನ್ನೆಲೆ ಮಾಲ್‌ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಇದೀಗ ಗ್ರಾಹಕರ ಸಂಖ್ಯೆ ಚೇತರಿಕೆಯಾಗಿದೆ. ಆರಂಭದಲ್ಲಿ ನಿರೀಕ್ಷಿಸಿದಷ್ಟು ಗ್ರಾಹಕರು ಇಲ್ಲದಿದ್ದರೂ, ವಾರಾಂತ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುವ  ಸಾಧ್ಯತೆ ಇದೆ. 
-ನಂದೇಶ್‌, ಗರುಡಾ ಮಾಲ್‌ ಪ್ರತಿನಿಧಿ

* ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next