Advertisement

ದಿ ಮೇಕಿಂಗ್‌ ಆಫ್ ಪಿರಂಗಿಪುರ

05:37 PM Sep 23, 2017 | |

ಒಂದು ಚಿತ್ರ ಯಶಸ್ವಿಯಾಗುವುದಕ್ಕೆ ಮುಖ್ಯ ಕಾರಣ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಎನ್ನುವ ನಂಬಿಕೆ ಹಲವರಲ್ಲಿದೆ. ಅಂದರೆ, ಶೂಟಿಂಗ್‌ ಮುಂಚಿನ ಕೆಲಸಗಳು. ಕಥೆ ಬರೆಯುವುದರಿಂದ ಪ್ರಾರಂಭವಾಗಿ, ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅಗತ್ಯಗಳನ್ನು ಅನುವು ಮಾಡಿಕೊಳ್ಳುವುದು ಪ್ರೀ-ಪ್ರೊಡಕ್ಷನ್‌ನ ಒಂದು ಅಂಗ. ಕೆಲವರು ಈ ಪ್ರೀ-ಪ್ರೊಡಕ್ಷನ್‌ಗೆಂದೇ ಸಾಕಷ್ಟು ಸಮಯ, ತಲೆ ಖರ್ಚು ಮಾಡಿಕೊಂಡು ಆ ನಂತರ ಚಿತ್ರೀಕರಣ ಪ್ರಾರಂಭಿಸುತ್ತಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆ “ಬಾಹುಬಲಿ’. ಈ ಚಿತ್ರಕ್ಕಾಗಿ ನಿರ್ದೇಶಕ ರಾಜಮೌಳಿ ಅವರು ಎಷ್ಟು ಕಷ್ಟಪಟ್ಟರು ಮತ್ತು ಏನೆಲ್ಲಾ ತಯಾರಿ ಮಾಡಿಕೊಂಡರು ಎಂದು ಗೊತ್ತಾಗಬೇಕೆಂದರೆ, ಯೂಟ್ಯೂಬ್‌ನಲ್ಲಿ ಸಾಕಷ್ಟು ವಿವರಣೆಗಳು ಸಿಗುತ್ತವೆ. ಆ ಲೆವೆಲ್‌ಗ‌ಲ್ಲದಿದ್ದರೂ ಕನ್ನಡದಲ್ಲೂ “ಪಿರಂಗಿಪುರ’ ಎಂಬ ಚಿತ್ರಕ್ಕೂ ಸಾಕಷ್ಟು ತಯಾರಿ ನಡೆಸಿಕೊಂಡು, ಇದೀಗ ಚಿತ್ರತಂಡ ಚಿತ್ರೀಕರಣ ಮಾಡುವುದಕ್ಕೆ ಸಜ್ಜಾಗುತ್ತಿದೆ.

Advertisement

“ಪಿರಂಗಿಪುರ’ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಸಿನಿಮಾ. ಜನಾರ್ದನ್‌ ಪಿ.ಜಾನಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದು ಅವರಮೊದಲ ಪ್ರಯತ್ನವಾದ್ದರಿಂದ, ನಿರ್ದೇಶಕರಿಗೆ ಹೊಸದೇನನ್ನೋ ಕಟ್ಟಿಕೊಡಬೇಕು ಎಂಬ ಆಸೆ ಮತ್ತು ಹಠ. ಅದಕ್ಕಾಗಿಯೇ ಅವರು, ಕಳೆದ ಎರಡು ವರ್ಷಗಳಿಂದಲೂ ಕಥೆ ಕೆತ್ತನೆಯಲ್ಲಿ ತೊಡಗಿ, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ, ಅವರದೇ ಆದ ಕಲ್ಪನೆಯ ಊರನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಅಂದಹಾಗೆ, “ಪಿರಂಗಿಪುರ’ ಎಂಬ ಇರದೇ ಊರನ್ನು ಸೃಷ್ಟಿಸಿರುವ ನಿರ್ದೇಶಕರು ಈ ಚಿತ್ರದಲ್ಲಿ ನಾಯಕ ಸಂಚಾರಿ ವಿಜಯ್‌ಗೆ ಗುರುತೇ ಸಿಗದಂತಹ ಗೆಟಪ್‌ ಹಾಕಿಸಿ, ಒಂದಷ್ಟು ಕುತೂಹಲ ಕೆರಳಿಸಿದ್ದಾರೆ. 

ಬೆಂಗಳೂರಿನಿಂದ ರಾಜಸ್ಥಾನದವರೆಗೆ ನಡೆಯುವ ಜರ್ನಿ ಕಥೆ ಇದು. ಸುಮಾರು 70 ದಿನಗಳ ಕಾಲ ತಂಡ ಪ್ರಯಾಣ ಬೆಳೆಸುತ್ತಲೇ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ. ಈ ಚಿತ್ರದ ಚಿತ್ರೀಕರಣಕ್ಕೆ ರಾಜಸ್ಥಾನದಲ್ಲಿ ಒಂದು ಗ್ರಾಮವವನ್ನೇ ಮರು ಸೃಷ್ಟಿಸುವ ಯೋಚನೆ ಚಿತ್ರತಂಡಕ್ಕಿದೆ. ತಮಿಳಿನ “ನಾನ್‌ ಕಡವುಳ್‌’, “ಪರದೇಸಿ’ ಮುಂತಾದ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿರುವ ಬಾಲಚಂದರ್‌ ಅವರು ಈ ಚಿತ್ರಕ್ಕೆ ಹೊಸ ರೀತಿಯಲ್ಲಿ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, “ಪಿರಂಗಿಪುರ’ ಎಂಬ ಕಾಲ್ಪನಿಕ ಊರನ್ನು ಪಾಕಿಸ್ತಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಸೃಷ್ಟಿಸಲಾಗಲಿದೆಯಂತೆ. ಈ ಚಿತ್ರದ ಬಹುಪಾಲು ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯಲಿದೆ ಮತ್ತು ಕಾಶ್ಮೀರದ ಒಂದು ಪ್ರಾಂತದಲ್ಲಿ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆಯಲಿದೆ. ಸರಿಸುಮಾರು ಏಳು ಸಾವಿರ ಕಿಲೋಮೀಟರ್‌ಗಳಷ್ಟು ವಿಸ್ತಾರದಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಈ ಚಿತ್ರದ ಮತ್ತೂಂದು ಹೆಗ್ಗಳಿಕೆ. ದಕ್ಷಿಣ ಭಾರತದ ಯಾವ ಚಿತ್ರವೂ ಇಷ್ಟೊಂದು ದೀರ್ಘ‌ವಾಗಿ ಮರಳುಗಾಡಿನಲ್ಲಿ ಚಿತ್ರೀಕರಣ ನಡೆಸಿಲ್ಲ. ಹೈದರಾಬಾದ್‌ನ ತಂಡವೊಂದು ಮಿನಿಯೇಚರ್‌ ನಿರ್ಮಿಸಿದರೆ, ಮೇಕ್‌ ರಿಯಲ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಎನ್ನುವ ಚೆನ್ನೈನ ಸಂಸ್ಥೆಯೊಂದು ಚಿತ್ರಕ್ಕೆ ಊಗಿ ರೂಪಿಸುವಲ್ಲಿ ದುಡಿಯುತ್ತಿದೆ.

Advertisement

ನಾಯಕ ಸಂಚಾರಿ ವಿಜಯ್‌ ಚಿತ್ರದಲ್ಲಿ ಮೂರು ವಿಭಿನ್ನ ರೀತಿಯ ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ನಕ್ಷತ್ರ ಮತ್ತು ರಾಕಿ ಎಂಬ ಇನ್ನೆರಡು ವಿಶಿಷ್ಟ ಪಾತ್ರಗಳ ಕಥೆಯೂ ವಿಜಯ್‌ ಪಾತ್ರದ ಜತೆ ಸಾಗಲಿವೆ. ಇದರ ಜೊತೆಗೆ  ಪ್ರಾಚೀನ ಕಾಲದ ಅಪರಾಧ ಚರಿತ್ರೆಯನ್ನು ಬಿಂಬಿಸುವ ಹಚ್ಚೆಗಳನ್ನು ಹೊಂದಿರುವ ಪಿರಂಗಿಗಳು ಎಂಬ ಪಾತ್ರಗಳನ್ನೂ ಸೃಷ್ಟಿಸಲಾಗಿದೆ. ಜೈ ಮತ್ತು ರಾಣಾ ಎಂಬ ಇಬ್ಬರು ಕಲಾವಿದರು ಈ ವಿಶಿಷ್ಟ ಪಾತ್ರಗಳಿಗೆ ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕೆಂದೇ ಅವರಿಬ್ಬರೂ ಕಳೆದ ಒಂದು ವರ್ಷದಿಂದ ತಮ್ಮ ದೇಹ ದಂಡಿಸುತ್ತಿದ್ದಾರೆ. ಚಿತ್ರಕ್ಕೆ ಶ್ಯಾಮ್‌ ಎಲ್‌. ರಾಜ್‌ ಸಂಗೀತ ನೀಡಿದರೆ, ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣವಿದೆ. ದಿನೇಶ್‌ ಸುಬ್ಬರಾಯನ್‌ ಸಾಹಸ ಚಿತ್ರಕ್ಕಿದೆ. ಚಿತ್ರವನ್ನು PRISWES ಎಂಬ ಸಂಸ್ಥೆ ನಿರ್ಮಿಸುತ್ತಿದ್ದು, ಇಷ್ಟರಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next