Advertisement

ದಲಿತರ ಉದ್ಧಾರಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ: ನಾಗಾವರ

12:58 PM Mar 13, 2017 | Team Udayavani |

ಕುಂದಾಪುರ:  ದಲಿತರು ಶಿಕ್ಷಣದಿಂದ  ವಂಚಿತರಾಗಿ ರುವುದರಿಂದಲೇ  ಇಂದು ತಮ್ಮ ಹಕ್ಕಿಗಾಗಿ ನಾನಾ ತರಹದ ಸಂಕಷ್ಟಪಡುವಂತಹ ಸ್ಥಿತಿ ಬಂದೊದಗಿದೆ. ಆದ್ದರಿಂದ  ದಲಿತರು ತಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮೊದಲು ಶಿಕ್ಷಣ ಪಡೆಯುವುದು ಅತೀ ಮುಖ್ಯ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗಾವರ ಬೆಂಗಳೂರು ಹೇಳಿದರು.

Advertisement

ಅವರು ಕುಂದಾಪುರ ತಾಲೂಕು ಹೊಂಬಾಡಿ-ಮಂಡಾಡಿಯಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಶಾಖೆ ಹಾಗೂ ನಮ್ಮ ಭೂಮಿ ನಮ್ಮ ಹಕ್ಕು ಅಡಿಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ದಿಕ್ಸೂಚಿ ಭಾಷಣ ಮಾಡಿದ ಪ್ರಗತಿಪರ ಹೋರಾಟಗಾರ್ತಿ ಹಾಗೂ ನ್ಯಾಯವಾದಿ ಅಖೀಲಾ ವಿದ್ಯಾಸಂದ್ರ ಬೆಂಗಳೂರು  ಅವರು ಮಾತನಾಡಿ, ಸಮಾಜ ದಲ್ಲಿ ಹಿಂದುಳಿದವರನ್ನು ಮುಂದು ತರುವಲ್ಲಿ ಸರಕಾರಗಳು ಮನಸ್ಸು ಮಾಡುತ್ತಿಲ್ಲ.  ಅವರು ಕೇವಲ ಮತದ ದೃಷ್ಟಿಯನ್ನಿಟ್ಟುಕೊಂಡು ವ್ಯವಹರಿಸುತ್ತಿ ದ್ದಾರೆ.  ದಲಿತರು ಸಂಘಟಿತರಾಗಿ ಹೋರಾಡಬೇಕು. ದುಡಿಯುವ ಕೈಗಳಿಗೆ ಅಧಿಕಾರ ಬಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾಜು ಕೆ.ಸಿ. ಬೆಟ್ಟಿನಮನೆ ವಹಿಸಿದ್ದರು. 

ಅಂಬೇಡ್ಕರ್‌ ಭಾವಚಿತ್ರಕ್ಕೆ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರಗತಿಪರ ಚಿಂತಕ ಜಯನ್‌ ಮಲ್ಪೆ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ ಅಧ್ಯಕ್ಷ ದಿನಕರ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಮಾಲಾರ್ಪಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಎಂಜಿನಿಯರ್‌ ಮಂಡಾಡಿ ರತ್ನಾಕರ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಗ್ರಾ.ಪಂ. ಸದಸ್ಯ ಬಿ. ಅರುಣ ಕುಮಾರ ಹೆಗ್ಡೆ, ಚಂದ್ರಶೇಖರ ಹೆಗ್ಡೆ, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್‌, ಸುರೇಶ ಬೈಂದೂರ್‌, ದ.ಕ. ಜಿಲ್ಲಾ ಸಂಚಾಲಕ ಆನಂದ ಬೆಳ್ಳಾರೆ, ಮಂಗಳೂರು ಸಂಚಾಲಕ ಗಿರೀಶ, ನಿರ್ಮಲ ಕುಮಾರ ಹಾಗೂ ತಾಲೂಕು, ಹೋಬಳಿ ಸಂಚಾಲಕರು ಉಪಸ್ಥಿತರಿದ್ದರು.ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಸ್ವಾಗತಿಸಿ, ಕೃಷ್ಣಮೂರ್ತಿ ಕುಂದಾಪುರ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಮಿತಿ ಸದಸ್ಯ ಚಂದ್ರ ಹಳಗೆರೆ ವಂದಿಸಿದರು.

Advertisement

ಉಡುಪಿ ಜಿಲ್ಲೆಯಲ್ಲಿ 850 ಎಕ್ರೆ ಡಿಸಿ ಮನ್ನಾ ಭೂಮಿ ಇದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಂಚಲು ಮೀಸಲಿದ್ದು ಸರಕಾರ ಅದ ರಲ್ಲಿ ಸಮಾಜಿಕ ಅರಣ್ಯ, ಸರಕಾರಿ ಕಚೇರಿ ಹಾಗೂ ಕೆಲವು ಜಾಗಗಳನ್ನು ಬಲಿಷ್ಠರು ಆಕ್ರಮಣ ಮಾಡಿದ್ದು ನಮ್ಮನ್ನು ಮೂಲೆಗುಂಪು ಮಾಡುವುದರ ಮೂಲಕ ನಾವು ಸಮಾಜದ ಮುಖ್ಯ ವಾಹಿನಿಗೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿ ಎಲ್ಲೆಲ್ಲಿ ಡಿಸಿ ಮನ್ನಾ ಭೂಮಿ ಇದೆಯೋ ಅದನ್ನು ಗುರುತಿಸಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಯನ್ನು ಪರಿಶಿಲಿಸಿ ಅರ್ಹ ಭೂರಹಿತ ದಲಿತರಿಗೆ ಹಂಚಬೇಕು.
-ಟಿ. ಮಂಜುನಾಥ ಗಿಳಿಯಾರು, ನ್ಯಾಯವಾದಿ, 
ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next