Advertisement
ಈ ರಸ್ತೆ ಕೇವಲ ಎರಡು ಜಿಲ್ಲೆಗಳ ಮಧ್ಯೆ ಸಂಪರ್ಕ ಸೇತುವಾಗಿರದೆ ಬಳ್ಳಾರಿ-ದಾವಣಗೆರೆ ಮತ್ತಿತರ ಜಿಲ್ಲೆಗಳಿಂದಲೂ ಮಂಗಳೂರಿಗೆ ಸಂಪರ್ಕ ಹೊಂದಿರುವ ರಾಜ್ಯದ ಪ್ರಮುಖ ಹೆದ್ದಾರಿಯಾಗಿದೆ. ನಿತ್ಯ ಸಾವಿರಾರು ವಾಹನ ಗಳು ಸಂಚರಿಸುತ್ತಿದ್ದರೂ ಮುರಿದು ಬಿದ್ದ ತಡೆಬೇಲಿಯ ದುರಸ್ತಿ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ಮಳೆಗಾಲ ಆರಂಭಗೊಂಡಿದ್ದರಿಂದ ಪೊದೆಗಳು, ಮರಮಟ್ಟುಗಳು ರಸ್ತೆಗೆ ವಾಲಿಕೊಂಡಿವೆ. ಇದರಿಂದ ವಾಹನ ಸವಾರರಿಗೆ ಇನ್ನೂ ಹೆಚ್ಚಿನ ಅಪಾಯ ಎದುರಾಗುತ್ತಿದೆ.
ಈ ರಸ್ತೆಗೆ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಒಂದೆಡೆ ಬಂಡೆ ಕಲ್ಲಿನಿಂದಾವೃತ ವಾದ ಗುಡ್ಡವಾದರೆ, ಇನ್ನೊಂದೆಡೆ ಚರಂಡಿ ನಿರ್ಮಿಸಲು ಭಾರೀ ಕಂದಕವಿದೆ. ನಿರ್ಮಿಸಿದ ಚರಂಡಿಯಲ್ಲಿ ಹೂಳುತುಂಬಿ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಹಾಳಾಗುತ್ತಿದೆ. ನಿತ್ಯವೂ ಘನ ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಳಾಗುವ ಮೊದಲು ಚರಂಡಿ ಸ್ವತ್ಛಗೊಳಿಸಬೇಕಿದೆ.
Related Articles
Advertisement
ಪರ್ಯಾಯ ಈ ಘಾಟಿರಸ್ತೆ ಇಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಘಾಟಿಗಳು ವಾಹನಗಳ ದಟ್ಟಣೆಯಿಂದಾಗಿ ಕುಸಿದು ಸಂಚಾರ ಕಡಿತವಾಗುತ್ತದೆ. ಇವೆಲ್ಲದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಬದಲಿ ಹೆದ್ದಾರಿಯಾಗಿ ಬಾಳೆಬರೆ ಘಾಟಿಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ.
ಶಾಶ್ವತ ಗೋಡೆ ನಿರ್ಮಾಣ ಹುಲಿಕಲ್ ಘಾಟಿಯ ಬಾಳೆಬರೆ ದೇಗುಲದ ಬಳಿ ಅಪಾಯಕಾರಿ ತಿರುವು ಇದೆ. ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯೊಂದಿಗೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಂಡು ನೂತನ ತಂತ್ರಜ್ಞಾನದೊಂದಿಗೆ ಶಾಶ್ವತ ತಡೆಗೋಡೆ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಡಿ ರಸ್ತೆ ವಿಸ್ತರಣೆಯೊಂದಿಗೆ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು.
-ಶೇಷಪ್ಪ, ಎಇಇ ಲೋಕೋಪಯೋಗಿ ಇಲಾಖೆ, ಹೊಸನಗರ ಉಪವಿಭಾಗ ಶಾಶ್ವತ ತಡೆಗೋಡೆಗೆ
ಸರಕಾರಕ್ಕೆ ಪತ್ರ
ಪ್ರತಿ ವರ್ಷ ಹೆದ್ದಾರಿ ನಿರ್ವಹಣೆ ಕಾರ್ಯ ಮಾಡಲಾಗುತ್ತಿದೆ. ಆದರೆ ಈ ಬಾರಿ ಇನ್ನೂ ಕಾಮಗಾರಿ ಆರಂಭಿಸಿಲ್ಲ. ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಲಿದೆ. ಇನ್ನೆರಡು ಮೂರು ದಿನಗಳಲ್ಲಿ ಚರಂಡಿ ಯಲ್ಲಿ ತುಂಬಿರುವ ಹೂಳೆತ್ತ ಲಾಗುವುದು. ದೊಡ್ಡ ಮಟ್ಟದ ಸಮಸ್ಯೆ ಇದ್ದರೆ ಪರಿಶೀಲನೆ ನಡೆಸಿ, ಶಾಶ್ವತ ತಡೆಬೇಲಿ ನಿರ್ಮಾಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗುವುದು.
-ದುರ್ಗಾದಾಸ್, ಎಇಇ
ಲೋಕೋಪಯೋಗಿ ಇಲಾಖೆ ಉಡುಪಿ ಜಿಲ್ಲೆ ಉಪವಿಭಾಗ.