Advertisement

ಮಹದಾಯಿ ನದಿ‌ ನೀರು ಹಂಚಿಕೆ ವಿವಾದ ಶೀಘ್ರದಲ್ಲಿ ಇತ್ಯರ್ಥವಾಗಲಿದೆ: ಶೆಟ್ಟರ್

09:50 AM Oct 24, 2019 | Team Udayavani |

ಹುಬ್ಬಳ್ಳಿ: ಮಹದಾಯಿ ನದಿ‌ ನೀರು ಹಂಚಿಕೆ ವಿವಾದ ಶೀಘ್ರದಲ್ಲಿ ಇತ್ಯರ್ಥವಾಗಲಿದ್ದು ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಸಿಹಿ ಸುದ್ದಿ‌ ನೀಡಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕಿದೆ. ಬಹು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆಗೆ ಚಾಲನೆ ಸಿಗಲಿದೆ ಈ ಭಾಗದ ಜನರಿಗೆ ಅತ್ಯಂತ ಖುಷಿ ಸುದ್ದಿ ಎಂದರು.

ನ್ಯಾಯಾಧೀಕರಣ ತೀರ್ಪಿನಿಂದ ಹಂಚಿಕೆಯಾದ‌ ನೀರಿನ‌ ಬಳಕೆ ಅನುಕೂಲವಾಗಲಿದೆ. ಮಹದಾಯಿ ತೀರ್ಪು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದವಾಗಿದೆ. ಮಹದಾಯಿ, ಕಳಸಾ ಬಂಡೂರಿ ಯೋಜನೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ತಕ್ಷಣವೇ ಸರ್ಕಾರ ಯೋಜನೆಗೆ ಅಗತ್ಯ ಅನುದಾನ ನೀಡಲಿದೆ.ಯೋಜನೆಗಿದ್ದ ಅಡ್ಡಿ ಆತಂಕ ಎಲ್ಲವೂ ನಿವಾರಣೆಯಾಗಿದೆ.ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next