Advertisement

ಮಾದಾಪೂರ ಶಾಲೆಗೆ ಮತ್ತೂಬ್ಬ ಅತಿಥಿ ಶಿಕ್ಷಕರ ನೇಮಕ

04:24 PM Jan 29, 2020 | Suhan S |

ದೋಟಿಹಾಳ: ಮಾದಾಪೂರ ಸರ್ಕಾರಿ ಶಾಲೆಗೆ ಸಾಸ್ವಿಹಾಳ ಶಾಲೆಯ ಅತಿಥಿ ಶಿಕ್ಷಕ ಶಿವುರಾಜ ನಾಡಗೌಡ ಅವರನ್ನು ನಿಯೋಜನೆ ಮಾಡಲಾಗಿದೆ. ಉದಯವಾಣಿ ಪತ್ರಿಕೆಯಲ್ಲಿ “ಮಾದಾಪೂರ ಶಾಲೆಯಲ್ಲಿ ಶಿಕ್ಷಕರ ಕೊರತೆ’ ಶೀರ್ಷಿಕೆಯಡಿ ಜ.24ರಂದು ಪ್ರಕಟಗೊಂಡ ವರದಿಗೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾದಾಪೂರ ಶಾಲೆಗೆ ಇನ್ನೊಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ.

Advertisement

ಮಾದಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 123 ಮಕ್ಕಳಿದ್ದು, ಅವರಿಗೆ 3 ಜನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬ ಶಿಕ್ಷಕಿ ಹೆರಿಗೆ ರಜೆ ಮೇಲೆ ತೆರಳಿದ್ದಾಳೆ. ಒಬ್ಬ ಶಿಕ್ಷಕ ಶಾಲೆ ದಾಖಲಾತಿ ಸರಿಪಡಿಸಿಕೊಂಡರೆ, ಇನ್ನುಳಿದ ಇಬ್ಬರ ಅತಿಥಿ ಶಿಕ್ಷಕರ ಮೇಲೆ ಶಾಲೆ ನಡೆಯುತ್ತಿದೆ. 1-3ನೇ ತರಗತಿಗೆ ಒಟ್ಟು 63 ಮಕ್ಕಳಿದ್ದು, ಎರಡು ನಲಿ-ಕಲಿ ತರಗತಿ ಮಾಡಿಕೊಂಡು ಶಾಲಾ ಪ್ರಭಾರಿ ಮುಖ್ಯಗುರುಗಳು ಪಾಠ ಮಾಡುತ್ತಾರೆ. ಹೀಗಾಗಿ 4, 5, 6 ಮತ್ತು 7ನೇ ತರಗತಿಗಳ ಮಕ್ಕಳಿಗೆ ಅತಿಥಿ ಶಿಕ್ಷಕರೇ ಪಾಠ ಮಾಡಬೇಕಾಗಿದೆ. ಇದರಿಂದ ಮಕ್ಕಳಿಗೆ ವಿಷಯವಾರು ಶಿಕ್ಷಕರಿಲ್ಲದ ಕಾರಣ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಗಮನಿಸಿ ವರದಿ ಪ್ರಕಟಿಸಿತ್ತು. ಹೀಗಾಗಿ ಸಮಸ್ಯೆಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗ ಮತ್ತೂಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿದೆ.

ಈ ಕುರಿತು ಪ್ರಭಾರಿ ಮುಖ್ಯಗುರು ಬಸವರಾಜ ಅಂಬಳನೂರು ಪ್ರತಿಕ್ರಿಯೆ ನೀಡಿ, ನಮ್ಮ ಶಾಲೆಗೆ ಸಾಸ್ವಿಹಾಳ ಶಾಲಾ ಅತಿಥಿ ಶಿಕ್ಷಕ ಶಿವುರಾಜ ನಾಡಗೌಡ ಅವರನ್ನು ಕಳಿಸಿದ್ದಾರೆ. ಆದರೆ ಇದುವರೆಗೂ ನಮಗೆ ಯಾವುದೇ ಆದೇಶ ಬಂದಿಲ್ಲ. ಅತಿಥಿ ಶಿಕ್ಷಕರು ಶಾಲೆಗೆ ಬಂದು ಕಳೆದೆರಡು ದಿನಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next