Advertisement
ಕಟಪಾಡಿಯ ಕುಸುಮಾ ಅವರಿಗೆ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ನಲ್ಲಿ ಲಿಂಕ್ ಕಳುಹಿಸಿ ಗ್ರೂಪ್ವೊಂದಕ್ಕೆ ಸೇರ್ಪಡೆಗೊಳ್ಳುವಂತೆ ತಿಳಿಸಿದ್ದರು. ಅದನ್ನು ಕ್ಲಿಕ್ ಮಾಡಿದಾಗ BD_H_Apollo Business School ಹೆಸರಿನ ವಾಟ್ಸಾಪ್ ಗ್ರೂಪ್ಗೆ ಸೇರ್ಪಡೆಗೊಂಡು ಆ ಗ್ರೂಪ್ನಲ್ಲಿ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭಾಂಶದ ಆಸೆ ತೋರಿಸಿದ ಆರೋಪಿಗಳು Apollo Lemona ಎಂಬ ಟ್ರೇಡಿಂಗ್ ಆ್ಯಪ್ ಬಗ್ಗೆ ತಿಳಿಸಿದ್ದರು. ಇದನ್ನು ನಂಬಿದ ಕುಸುಮಾ ಅವರು ಆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿ ಅನಂತರದಲ್ಲಿ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 5,73,024 ರೂ. ಪಾವತಿಸಿದ್ದರು. ಇದೀಗ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನಾಗಲಿ ನೀಡದೆ ನಷ್ಟ ಉಂಟು ಮಾಡಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವರ್ಗಾವಣೆ
01:40 AM May 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.