ಮೂಲ್ಕಿ: ಸಾರ್ವಜನಿಕ ರಂಗದ ಸರಕಾರಿ ಸೇವೆಯಲ್ಲಿ ಜನತೆಯ ಪ್ರೀತಿ ವಿಶ್ವಾಸವನ್ನು ಪಡೆದವರಿಗೆ ನಿವೃತ್ತಿಯ ಅನಂತರ ಸಿಗುವ ಗೌರವ ಅತ್ಯಂತ ಶ್ರೇಷ್ಠವಾದುದು ಎಂದು ಹಂಪನಕಟ್ಟೆ ಕೆನರಾ ಬ್ಯಾಂಕಿನ ಹಿರಿಯ ಶಾಖಾಧಿಕಾರಿ ಶ್ರೀಕರ ಪೈ ಹೇಳಿದರು.
ಕೆನರಾ ಬ್ಯಾಂಕಿನಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ಮೂಲ್ಕಿಯ ಕೆನರಾ ಬ್ಯಾಂಕಿನ ನಿವೃತ್ತರಾದ ಅಶೋಕ್ ಕಾಮತ್ ಅವರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರಕಾರದ ನೀತಿ ನಿಯಮಗಳನ್ನು ಗೌರವಿಸಿ ಸರಕಾರದಿಂದ ಸಿಗುವ ಸೌಕರ್ಯಗಳನ್ನು ನಗು ಮುಖದಿಂದ ಗ್ರಾಹಕರಿಗೆ ಕೊಡುವ ಜತೆಗೆ ಬ್ಯಾಂಕಿನ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅಶೋಕ್ ಕಾಮತ್ ಅವರ ಸೇವೆ ಶ್ಲಾಘನೀಯವಾದುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಶಾಖೆಯ ಶಾಖಾಧಿಕಾರಿ ರಾಜೇಂದ್ರ ಅವರು, ಬ್ಯಾಂಕಿನ ಸೇವೆಯಲ್ಲಿ ಗ್ರಾಹಕರ ಜತೆಗೆ ಇರುವ ಉತ್ತಮ ಸಂಬಂಧ ಮತ್ತು ಸಿಬಂದಿಯ ಒಗ್ಗಟ್ಟಿನ ಶ್ರಮ ನಮ್ಮ ಮತ್ತು ಬ್ಯಾಂಕಿನ ಬೆಳವಣಿಗೆಯಲ್ಲಿ ಮಹತ್ತರದ ಪಾತ್ರ ವಹಿಸಬಲ್ಲದು ಎಂದು ಹೇಳಿದರು.
ಅಶೋಕ್ ಕಾಮತ್ ಅವರ ಪತ್ನಿ ಆಶಾ ಎ.ಕಾಮತ್ ಅವರನ್ನು ಶಾಖೆಯ ವತಿಯಿಂದ ಸಮ್ಮಾನಿಸಲಾಯಿತು. ಬಳಿಕ ಮಾತ ನಾ ಡಿದ ಅಶೋಕ್ ಕಾಮತ್ ಅವರು, ಕೆನರಾ ಬ್ಯಾಂಕಿನ ಸೇವೆಯ ಮೂಲಕ ನನ್ನ ಬದುಕಿಗೆ ಬೇಕಾದುದೆಲ್ಲವನ್ನು ಪಡೆಯು ವಂತಾಯಿತು. ಜತೆಗೆ ಸಾರ್ವಜನಿಕರ ಸೇವೆಯ ಮೂಲಕ ಮಾನವೀಯ ಸಂಬಂಧವನ್ನು ಬೆಳೆ ಸಿ ಕೊ ಳ್ಳ ಲು ಸಾಧ್ಯವಾಯಿತು ಎಂದರು.
ಅಧಿಕಾರಿಗಳಾದ ರಿಯಾನ್, ಲೋಕೇಶ್ ಮತ್ತು ಅನೇÌಶ್ ಕಾರ್ಯಕ್ರಮದಲ್ಲಿ ಅಶೋಕ್ ಅವರ ಸೇವೆಯ ಬಗ್ಗೆ ವಿವರಿಸಿದರು.
ಪ್ರತಿಮಾ ನಾಯಕ್, ರಾಮಕೃಷ್ಣ ರಾವ್ ಮತ್ತು ವಿಶ್ವನಾಥ್ ಶುಭ ಹಾರೈಸಿದರು. ಸುಮನಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.