Advertisement

ಕುಷ್ಟಗಿ: ಕನ್ನಡ ಭಾಷೆಯ ಅಭಿಮಾನ ಮರೆಯದೇ ಮೆರೆಯಬೇಕು; ಶಾಸಕ ಅಮರೇಗೌಡ ಪಾಟೀಲ

11:29 AM Nov 01, 2022 | Team Udayavani |

ಕುಷ್ಟಗಿ: ಕನ್ನಡ ಭಾಷಾಭಿಮಾನದ ಜೊತೆಗೆ ಬದುಕು ಕಟ್ಟಿಕೊಳ್ಳುವುದು ನಮ್ಮ ಮಕ್ಕಳಿಗೆ ಕಲಿಸೋಣ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕರೆ ನೀಡಿದರು.

Advertisement

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯೋಗಕ್ಕೆ ಬದುಕುವುದಕ್ಕೆ ಅನ್ಯ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಭಾಷೆಯ ಅಭಿಮಾನ ಮರೆಯದೇ ಮೆರೆಯಬೇಕು. ನಮ್ಮ ಮಾತೃ ಭಾಷೆ ಮರೆತರೆ ಮಾತೃ ದ್ರೋಹವಾದಂತೆ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶಿಲ್ದಾರ ಗುರುರಾಜ್ ಎಂ. ಚಲವಾದಿ, ಈ ಒಂದು ರಾಜ್ಯದಲ್ಲಿ ಹಲವು ಜಗತ್ತುಗಳಿವೆ. ನಮ್ಮ ರಾಜ್ಯದಲ್ಲಿ ಚಿನ್ನ, ಖನಿಜ, ಸಂಪತ್ತು, ಶ್ರೀಗಂಧ, ಸಾಗರ, ನದಿ ಸರೋವರಗಳು ಸೇರಿದಂತೆ ಹಲವು ಜಗತ್ತಿನ ವಿಶೇಷತೆಗಳು ಇಲ್ಲಿವೆ ಎಂದರು.

ಬಿ.ಆರ್.ಪಿ. ಶರಣಪ್ಪ ತೆಮ್ಮಿನಾಳ ಮಾತನಾಡಿ, ಕರ್ನಾಟಕ ಏಕೀಕರಣವಾದರೂ ನೂರಾರು ಸಮಸ್ಯೆಗಳಿವೆ. ಬೆಳಗಾವಿ, ಕಾಸರಗೋಡ, ಮಡಕಶಿರಾ ಗಡಿ ಸಮಸ್ಯೆ ಹೀಗೆ ನೂರಾರು ಸಮಸ್ಯೆಗಳ ಮದ್ಯೆ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಿದೆ ಎಂದರು.

Advertisement

ತಾ.ಪಂ. ಇಓ ಶಿವಪ್ಪ ಸುಭೇದಾರ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ್ ರಾಠೋಡ್, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾ ಪ್ರಸಾದ್, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರಾಜ್ಯೋತ್ಸವ ಪುರಸ್ಕೃತ ಶರಣಪ್ಪ ವಡಿಗೇರಿ,ಸಿಡಿಪಿಓ ವೀರಭದ್ರಯ್ಯ ಹಿರೇಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಕಳಕನಗೌಡ ಪಾಟೀಲ, ಶಿರೇಸ್ತೇದಾರ ಸತೀಶ್, ಧರ್ಮರಾಜ ಕಂಬಳಿ  ಇದ್ದರು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next