Advertisement

ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಆಗ್ರಹ

12:50 PM Jul 28, 2018 | |

ಶಿವಮೊಗ್ಗ: ಇಂಧನ ದರ ಇಳಿಕೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಶಿವಮೊಗ್ಗ ಲಾರಿ ಮಾಲೀಕರ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಅಖೀಲ ಭಾರತ ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜು.20 ರಿಂದ ಅನಿರ್ದಿಷ್ಟ ಕಾಲ ರಾಷ್ಟ್ರಾದ್ಯಂತ ವಾಣಿಜ್ಯ ವಾಹನಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಸಾಗಣೆ ಉದ್ಯಮ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾಗಣೆ ವಾಹನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು
ಹೇಳಿದರು. 

ಇಂಧನ ದರ ಇಳಿಕೆ, ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ ಹಾಗೂ ತ್ತೈಮಾಸಿಕ ಪರಿಶೀಲನಾ ಪದ್ಧತಿ ಜಾರಿಗೆ ತರಬೇಕು, ದೇಶವನ್ನು ಟೋಲ್‌ ಮುಕ್ತವಾಗಿಸಬೇಕು, ಥರ್‌ ಪಾರ್ಟಿ ವಿಮಾ ಪಾಲಿಸಿ ದರ ಕಡಿತಗೊಳಿಸುವುದು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು, ಟಿಡಿಎಸ್‌ ರದ್ದುಗೊಳಿಸಬೇಕು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಬೇಕು, ಇ-ವೇ ಬಿಲ್‌ ಸಮಸ್ಯೆ ಪರಿಹರಿಸಬೇಕು, ಪ್ರವಾಸಿ ವಾಹನ ಹಾಗೂ ಬಸ್‌ಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು, ಜವಾಹರಲಾಲ್‌ ನೆಹರೂ ಪೋರ್ಟ್‌ ಟ್ರಸ್ಟ್‌ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್‌ ಡಿಲವರಿ ಪದ್ಧತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸುಮಾರು 20 ಕೋಟಿ ಮಂದಿ ಈ ಉದ್ಯಮದಲ್ಲಿ ಪ್ರತ್ಯಕ್ಷ- ಪರೋಕ್ಷವಾಗಿ ದುಡಿಯುತ್ತಿದ್ದು ರಸ್ತೆ ಸಾರಿಗೆ ಉದ್ಯಮ ಸಾಮಾನ್ಯ ಜನರಿಗೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡುತ್ತಿದೆ. ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿದೆ.ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ ಜಾರಿ, ಇ-ವೇ ಬಿಲ್‌ ಜಾರಿ ತಂದಾಗ ಬೆಂಬಲ ನೀಡಿದೆ. ಆದರೆ ಈ ವ್ಯವಸ್ಥೆ ಜಾರಿಯಲ್ಲಾಗಿರುವ ಲೋಪ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಗೊಂದಲದಲ್ಲಿರುವ ಪರಿಣಾಮ ಸಾಗಾಣೆದಾರರು ಸೇರಿದಂತೆ ಸಾಮಾನ್ಯ ಜನರು ತೊಂದರೆಪಡುವಂತಾಗಿದೆ ಎಂದರು.

 ಶಿವಮೊಗ್ಗ ಲಾರಿ ಮಾಲೀಕರ ಒಕ್ಕೂಟದ ಪ್ರಮುಖರಾದ ಬಿ.ಎ. ತಲ್ಕಿನ್‌ ಅಹಮ್ಮದ್‌, ವೈ. ಎಚ್‌. ನಾಗರಾಜ್‌, ನಾಗೇಶ್‌, ಕಣ್ಣಪ್ಪ, ಬೋಜರಾಜ್‌, ಎಜಾಜ್‌ ಅಹಮ್ಮದ್‌, ಜಗದೀಶ್‌, ಲೋಕೇಶ್‌, ಸಮೀವುಲ್ಲ ಇನ್ನಿತರರಿದ್ದರು.
 
ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡೀಸೆಲ್‌ ಬೆಲೆ ಏರಿಕೆ ಮಾಡಿರುವುದು ಹಾಗೂ ಜಿಎಸ್‌ಟಿ ಕ್ರಮ ಖಂಡಿಸಿ ಶಿವಮೊಗ್ಗ ನಗರ ಮಿನಿ ಗೂಡ್ಸ್‌ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಿದ ನಂತರ ಮಾರುಕಟ್ಟೆಯಲ್ಲಿ ವ್ಯವಹಾರಗಳು ನಿಂತಿವೆ. ಇದರಿಂದ ಮಿನಿ ಗೂಡ್ಸ್‌ ವಾಹನಗಳಿಗೆ ವಹಿವಾಟು ಇಲ್ಲದಂತಾಗಿ ಜೀವನ ಕಷ್ಟಕರವಾಗಿದೆ. ಮಿನಿ ಗೂಡ್ಸ್‌ ವಾಹನಗಳ ಮೇಲಿನ ಫೈನಾನ್ಸ್‌ ಸಾಲ, ಬ್ಯಾಂಕ್‌ ಸಾಲ, ವಾರ್ಷಿಕ ಇನ್ಸುರೆನ್ಸ್‌ ಕಟ್ಟಲು ಸಾಧ್ಯವಾಗದೇ ತೊಂದರೆಯಾಗಿದೆ ಎಂದು ತಿಳಿಸಿದರು.

ವಾಹನಗಳು ರಿಪೇರಿಗೆ ಬಂದರೆ ಜಿಎಸ್‌ ಟಿಯಿಂದಾಗಿ ಬಿಡಿಭಾಗಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಶುಲ್ಕ ಭರಿಸಬೇಕಿದ್ದು, ಇದರಿಂದಾಗಿ ವಾಹನ ಚಾಲಕರು ಮತ್ತು ಮಾಲೀಕರು ಕಂಗೆಟ್ಟು ಹೋಗಿದ್ದಾರೆ. ಇದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್‌ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ನಗರದಲ್ಲಿ ಸಾವಿರಕ್ಕೂ ಹೆಚ್ಚು ಮಿನಿ ಗೂಡ್ಸ್‌ ವಾಹನ ಚಲಾಯಿಸಿ ಮಾಲೀಕರು ಮತ್ತು ಚಾಲಕರು ಜೀವನ ನಡೆಸುತ್ತಿದ್ದಾರೆ. ದೇಶಾದ್ಯಂತ ಲಕ್ಷಕ್ಕೂ ಹೆಚ್ಚು ಮಂದಿ ಅವಲಂಬಿತರಾಗಿದ್ದಾರೆ. ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್‌ ಬೆಲೆ ಏರಿಕೆ ಮಾಡಿ ಮಿನಿ ಗೂಡ್ಸ್‌ ವಾಹನ ಚಾಲಕರು ಮತ್ತು ಮಾಲೀಕರ ಬದುಕನ್ನು ಕಸಿದುಕೊಂಡಿವೆ ಎಂದು ದೂರಿದರು. ಗೌರವಾಧ್ಯಕ್ಷ ದಿನೇಶ್‌, ಅಧ್ಯಕ್ಷ ನರಸಿಂಹಮೂರ್ತಿ, ಇರ್ಷಾದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next