Advertisement

ಲೋಕಾ ವರದಿ ರಾಜ್ಯ ಸರ್ಕಾರಕ್ಕಿಲ್ಲ

11:01 AM Nov 04, 2017 | Team Udayavani |

ಬೆಂಗಳೂರು: “ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಲು ಅವಕಾಶವಿಲ್ಲ’ ಎಂದು ಲೋಕಾಯುಕ್ತ ಸಂಸ್ಥೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರದ ಮುಖೇನ ಸ್ಪಷ್ಟಪಡಿಸಿದೆ.

Advertisement

ಕಳೆದ ಆರು ವರ್ಷಗಳಿಂದ ಲೋಕಾಯುಕ್ತ ಆಯವ್ಯಯ ಲೆಕ್ಕವನ್ನು ಕಾಗದ ಪತ್ರಗಳ ಸಮಿತಿ ಮುಂದೆ ಮಂಡಿಸಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ನೋಟಿಸ್‌ ನೀಡಿದ್ದರಿಂದ ಅ.31ರಂದು  ಈ ಕುರಿತು ಲೋಕಾಯುಕ್ತ ಸಂಸ್ಥೆ ಸುದೀರ್ಘ‌ ಪತ್ರ ಬರೆದಿದೆ.

 ಸಂಸ್ಥೆಯ ಆಡಳಿತದ ವಾರ್ಷಿಕ ವರದಿಯನ್ನು ಲೋಕಾಯುಕ್ತ ಕಾಯಿದೆ 12(6) ಅನ್ವಯ ಪ್ರತಿವರ್ಷ ರಾಜ್ಯಪಾಲರಿಗೆ ವರದಿ ಕಳುಹಿಸಿಕೊಡಲು ಅವಕಾಶವಿದೆ. ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ನೇರವಾಗಿ ರಾಜ್ಯಸರ್ಕಾರಕ್ಕೆ ಸಲ್ಲಿಸಲು ಅವಕಾಶವಿಲ್ಲ, ಹೀಗಿದ್ದಾಗ  ಕಾಗದಪತ್ರಗಳ ಸಮಿತಿ ಮುಂದೆ ಸಲ್ಲಿಸುವ  ಪ್ರಶ್ನೆ ಉದ್ಭವಿಸದು ಎಂದು ಸ್ಪಷ್ಟೀಕರಣ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೋರಲಾಗಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಸಂಸ್ಥೆಯ ಪ್ರತಿವರ್ಷದ ಆಯವ್ಯಯ ಲೆಕ್ಕಗಳನ್ನು ಕೇಂದ್ರಲೆಕ್ಕ ಪರಿ ಶೋಧನಾ ಸಂಸ್ಥೆ (ಸಿಎಜಿ) ನಡೆಸಿ ರಾಜ್ಯಸರ್ಕಾರಕ್ಕೆ ವರದಿ ನೀಡುತ್ತದೆ. ಬಳಿಕ ಈ ವರದಿ ಉಭಯಸದನಗಳಲ್ಲಿ ಮಂಡನೆಯಾಗಲಿದೆ. ಆದರೆ, ರಾಜ್ಯಸರ್ಕಾರವೇ ಲೋಕಾಯುಕ್ತದಿಂದ ವರದಿ ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

ರಾಜ್ಯಪಾಲರಿಗೆ ವರದಿ ಸಲ್ಲಿಕೆ!: ಈ ಬೆಳವಣಿಗೆಗಳ ನಡುವೆಯೇ ಲೋಕಾಯುಕ್ತ ಸಂಸ್ಥೆಯ 2016-17ನೇ ಸಾಲಿನ ವಾರ್ಷಿಕ ವರದಿಯನ್ನು ರಾಜ್ಯಪಾಲರಿಗೆ ಅ.31ರಂದು ಸಲ್ಲಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯಯಲ್ಲಿ ದಾಖಲಾದ ದೂರುಗಳು, ಇತ್ಯರ್ಥಗೊಂಡಿರುವ ಅರ್ಜಿಗಳು,  ಆಡಳಿತ ನಿರ್ವಹಣೆ, ಸುಧಾರಣಾ ಕ್ರಮಗಳು, ಆಯ-ವ್ಯಯ ಖರ್ಚಿನ ವಿವರ ಸೇರಿದಂತೆ ಸಮಗ್ರ ವರದಿ ಸಲ್ಲಿಸಿದ್ದು ರಾಜಭವನಕ್ಕೆ ಸಲ್ಲಿಕೆಯಾಗಿದೆ ಎಂದು ಮೂಲಗಳ ಖಚಿತಪಡಿಸಿವೆ.

Advertisement

ಏನಿದು ಹಗ್ಗಜಗ್ಗಾಟ?: ಲೋಕಾಯುಕ್ತ ಆಯವ್ಯಯ ಲೆಕ್ಕವನ್ನು ವರದಿಯನ್ನು ಸಮಿತಿ ಮುಂದೆ ಮಂಡಿಸಿಲ್ಲ. ಈ ಬಗ್ಗೆ ವಿವರಣೆ  ನೀಡುವಂತೆ ಅ. 29 ಹಾಗೂ ಸೆ.5ರಂದು ನೋಟಿಸ್‌ ನೀಡಿದರೂ ಉತ್ತರ ನೀಡಿಲ್ಲ. ಹೀಗಾಗಿ  ಲೋಕಾಯುಕ್ತ ರಿಜಿಸ್ಟ್ರಾರ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅನುಮತಿ ನೀಡುವಂತೆ ಕಾಗದಪತ್ರಗಳ  ಸಮಿತಿ ಅಧ್ಯಕ್ಷ ಶಾಸಕ ಸಾ.ರಾ ಮಹೇಶ್‌ ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರಿಗೆ ಅನುಮತಿ ಕೋರಿ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next