Advertisement

ಲಾಕರ್‌ ಮಾತ್ರ ನಮ್ಮದು ಹೊಣೆಗಾರಿಕೆ ನಮ್ಮದಲ್ಲ

03:45 AM Jun 26, 2017 | |

ನವದೆಹಲಿ: ಮನೆಯಲ್ಲಿ ಕಳ್ಳರ ಕಾಟ ಎಂದು ಬ್ಯಾಂಕುಗಳ ಲಾಕರ್‌ನಲ್ಲಿ ಇಡುವ ಚಿನ್ನ ಅಮೂಲ್ಯ ದಾಖಲೆಗಳಿಗೆ ಗ್ಯಾರಂಟಿ ಇಲ್ಲವೇ? ಹೌದು, ಇಂಥ ಪ್ರಶ್ನೆ ಉದ್ಭವಿಸಿರುವುದು ಆರ್‌ಬಿಐ ನೀಡಿರುವ ಮಾಹಿತಿಯಿಂದ. ಏಕೆಂದರೆ, ಯಾವುದೇ ಬ್ಯಾಂಕಿನ ಶಾಖೆಯಲ್ಲಿ ದರೋಡೆ ಯಾಗಿ ಲಾಕರ್‌ನಲ್ಲಿ ಇಟ್ಟಿರುವ ಎಲ್ಲ ವಸ್ತುಗಳು ಕಳೆದುಹೋದರೆ ಇದಕ್ಕೆ ಬ್ಯಾಂಕ್‌ ಹೊಣೆಯಲ್ಲ. ಇದಕ್ಕೆ ಯಾವುದೇ ಪರಿಹಾರ ಕೂಡ ಸಿಗಲ್ಲ ಎಂದು ಆರ್‌ಬಿಐ ಹೇಳಿದೆ.

Advertisement

ಆರ್‌ಟಿಐ ಅಡಿ ಸಲ್ಲಿಸಲಾಗಿದ್ದ ಅರ್ಜಿ  ಯೊಂದಕ್ಕೆ ಉತ್ತರಿಸಿರುವ ದೇಶದ ಪರಮೋತ್ಛ ಬ್ಯಾಂಕ್‌, ಅಕ್ಷರಶಃ ಗ್ರಾಹಕರಿಗೆ ಆಘಾತ ನೀಡಿದೆ. ಈ ಉತ್ತರದಿಂದ ಬೇಸರಗೊಂಡಿರುವ ಅರ್ಜಿದಾರ ವಕೀಲ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬಾಡಿಗೆದಾರ-ಮಾಲೀಕ ಸಂಬಂಧ: ಕುಶ್‌ ಕಾಲಾÅ ಎಂಬ ವಕೀಲರು ಲಾಕರ್‌ಗಳ ಬಗ್ಗೆ ಮಾಹಿತಿ ಕೋರಿ ಆರ್‌ಬಿಐ ಮತ್ತು ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿದ್ದರು. ಲಾಕರ್‌ ವಿಚಾರದಲ್ಲಿ ಮಾತ್ರ ಖಾತೆದಾರರ ಜತೆ ಮನೆಯನ್ನು ಬಾಡಿಗೆಗೆ
ಕೊಡುವ ಮಾಲೀಕ ಮತ್ತು ಬಾಡಿಗೆದಾರರ ನಡುವೆ ಯಾವ ಸಂಬಂಧ ಇರುತ್ತದೆಯೋ ಅದನ್ನೇ ಅನುಸರಿಸಲಾಗುತ್ತದೆ ಎಂದು ಅವು ಹೇಳಿವೆ. ಹೀಗಾಗಿ, ಲಾಕರ್‌ ಹೊಂದಿದವರೇ ಅದರಲ್ಲಿರುವ ಅಮೂಲ್ಯ ವಸ್ತುಗಳಿಗೆ
ಹೊಣೆಗಾರರಾಗಬೇಕಾಗುತ್ತದೆ.

ಒಕ್ಕೂಟದ ಆರೋಪ: ಲಾಕರ್‌ಗಳ ಬಗ್ಗೆ ಬ್ಯಾಂಕ್‌ಗಳು ನೀಡಿರುವ ವಿವರಣೆ ನೀಡಿದ್ದಕ್ಕೆ ಆಕ್ಷೇಪ ಮಾಡಿರುವ ಅವರು ಬ್ಯಾಂಕ್‌ಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುವ ಗುಂಪುಗಳ ಕೂಟಗಳಾಗಿವೆ ಎಂದು ದೂರಿದ್ದಾರೆ. ಅವುಗಳು ತಮ್ಮ ಸೇವೆಯನ್ನು ಉತ್ತಮಪಡಿಸುವುದಕ್ಕೆ ಹಿಂದೇಟು ಹಾಕುತ್ತಿವೆ ಎಂದಿದ್ದಾರೆ. ಈ ಬಗ್ಗೆ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ದೂರು ನೀಡಿರುವ ಅವರು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

ಮನೆಯಲ್ಲೇ ಇಡಬಹುದಲ್ಲವೇ?: ಖಾತೆದಾರರೇ ಹೊಣೆ ವಹಿಸಿಕೊಳ್ಳುವುದಾದರೆ ಅಮೂಲ್ಯ ವಸ್ತುಗಳಿಗೆ ವಿಮೆ ಮಾಡಿಸಿ ಮನೆಯಲ್ಲಿಯೇ ಇರಿಸಿಕೊಳ್ಳಲು ಅವಕಾಶ ಉಂಟು. ವಾರ್ಷಿಕವಾಗಿ ನಿಗದಿಪಡಿಸಿರುವ ಶುಲ್ಕ ನೀಡಿ ಲಾಕರ್‌ನಲ್ಲಿ ವಸ್ತುಗಳನ್ನು ಇರಿಸಿಕೊಳ್ಳುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ್ದಾರೆ. 

Advertisement

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಪ್ರಕಾರ
1. ಮನೆ ಮಾಲೀಕ, ಬಾಡಿಗೆದಾರ ಎಂಬ ಬ್ಯಾಂಕ್‌ಗಳ ವಾದಕ್ಕೆ ತಿರಸ್ಕಾರ. ಏಕೆಂದರೆ ಅದು ಗ್ರಾಹಕರ ವಿರುದ್ಧವಾಗಿರುವುದರಿಂದ ಒಪ್ಪಲು ಸಾಧ್ಯವಿಲ್ಲ.
2. ಲಾಕರ್‌ ದರೋಡೆಯಾಗಿದೆ ಎಂಬುದನ್ನು ಖಾತೆದಾರ ಅಥವಾ ಗ್ರಾಹಕ ಸಾಬೀತುಪಡಿಸಬೇಕು.
3. ಬ್ಯಾಂಕ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಷ್ಟ ಉಂಟಾಗಿದೆ ಎಂದು ಸಾಬೀತುಪಡಿಸಿದರೆ ನಷ್ಟ ಹೊಂದಿದ
ವಸ್ತುವಿನ ವಿರುದ್ಧ ಪರಿಹಾರ ಪಡೆಯಬಹುದು.
4. ಪರಿಹಾರದ ಮೊತ್ತ ಅಲ್ಪವಾದರೆ ಗ್ರಾಹಕರು ವೇದಿಕೆಗೆ ಮನವಿ ಮಾಡಿಕೊಳ್ಳಲು ಅವಕಾಶ ಉಂಟು.

Advertisement

Udayavani is now on Telegram. Click here to join our channel and stay updated with the latest news.

Next