ಮುದ್ದೇಬಿಹಾಳ: ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಸರಕಾರಿ ಸಿಬ್ಬಂದಿಗಳ ತರಬೇತಿ ಮತ್ತುಸಭೆಗಳಿಗೆ ಉಪಯೋಗ ಮಾಡುವ ಸಾಮರ್ಥ್ಯ ಸೌಧ ಕಟ್ಟಡ ಈಗಾ ಪುಡಾರಿಗಳಿಗೆ ಅನೈತಿಕ ಚಟುವಟಿಕೆಗಳನ್ನುನಡೆಸುವ ತಾಣವಾಗಿದೆ.
ಹೌದು, ಆಲಮಟ್ಟಿ ರಸ್ತೆಯಲ್ಲಿರುವ ಸಂಗಮೇಶ್ವರ ನಗರದಲ್ಲಿ ತಾಪಂನಿಂದ ನಿರ್ಮಿಸಲಾದ ಸಾಮರ್ಥ್ಯ ಸೌಧ ಕಟ್ಟಡ ಪುಡಾರಿಗಳಿಗೆ ಅನುಕೂಲವಾಗಿದೆ. ನಿತ್ಯವೂ ಕಟ್ಟಡದಲ್ಲಿ ಮದ್ಯಪಾನಿಯರು ಲೇಟ್‌ನೆçಟ್ ಪಾರ್ಟಿ ಮಾಡುತ್ತಿದ್ದಾರೆಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಷ್ಟೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸವಾಗಿದೆ. ಸಾಮರ್ಥ್ಯ ಸೌಧ ಕಟ್ಟಡ ಇದ್ದರೂ ಪ್ರಯೋಜನವಾಗದ ಕಾರಣಮದ್ಯಪ್ರೀಯರು ಇಲ್ಲಿಗೆ ಬಾಟಲಿಗಳನ್ನು ತಂದು ಪಾರ್ಟಿ ಮಾಡಿ ಬಾಟಲಿಗಳನ್ನುಅಲ್ಲಿಯೇ ಎಸಗುತ್ತಾರೆ. ಇದರಿಂದ ಕಟ್ಟಡ ಸಂಪೂರ್ಣವಾಗಿ ಬಾಟಲಿಗಳಿಂದಲೇ ಭರ್ತಿಯಾಗಿದೆ.
ಅನುಪಯುಕ್ತವಾದ ಹಣ: ಸರಕಾರದಿಂದಲೇ ಸಾಮರ್ಥ್ಯ ಸೌಧ ಕಟ್ಟಿಸಲಾಗಿದೆ. ಆದರೆ ಕಟ್ಟಡದ ಉಪಯೋಗವನ್ನು ಮಾಡಿಕೊಳ್ಳದಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಅಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರಿ ಹಣ ಎಂದರೆ ಸಾರ್ವಜನಿಕರ ಹಣ ಎನ್ನುವುದು ಅಧಿಕಾರಿಗಳುತಿಳಿದುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಹಸ್ತಾಂತರ ಗೊಂದಲ: ಗುತ್ತಿಗೆದಾರರಿಂದ ಸಾಮರ್ಥ್ಯ ಸೌಧ ಕಟ್ಟಡವನ್ನು ತಾಪಂಕಾರ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಅ ಧಿಕಾರಿಗಳು ಹೇಳಿದರೆ ಕೆಲ ತಾಪಂ ಸದಸ್ಯರು ಕಟ್ಟಡವನ್ನು ಇನ್ನೂಹಸ್ತಾಂತರಿಸಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸಾಮರ್ಥ್ಯ ಸೌಧ ಕಟ್ಟಡದ ಬಗ್ಗೆ ತಾಪಂ ಸದಸ್ಯರು ಮತ್ತು ಅಧಿ ಕಾರಿಗಳ ನಡುವೆ ಗೊಂದಲವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಟ್ಟಡ ಉಪಯೋಗಿಸಿ: ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಿರ್ಮಿಸಲಾದ ಸಾಮರ್ಥ್ಯ ಸೌಧ ಕಟ್ಟಡವನ್ನು ಶೀಘ್ರದಲ್ಲಿಯೇ ಅ ಧಿಕಾರಿಗಳು ಬಳಕೆ ಮಾಡಿಕೊಳ್ಳಬೇಕು. ಇಲ್ಲವೇ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಕಟ್ಟಡದಿಂದ ಯುವಕರು ದುಶ್ಚಟಕ್ಕೆ ಬಿಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಇದನ್ನು ಸರಕಾರಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸರಿಪಡಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.
.ಶಿವಕುಮಾರ ಶಾರದಳ್ಳಿ