Advertisement
ಸಮರ್ಥ ನಾಯಕರು ಇಲ್ಲ: ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸರಿಸಮನಾಗಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣಾ ರಣರಂಗದಲ್ಲಿ ಹೋರಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಆದರೆ, ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅಭಾವವಿದೆ. ಸಮರ್ಥ ನಾಯಕರೂ ಇಲ್ಲದೇ ಸಾಂಪ್ರದಾ ಯಿಕ ಪೈಪೋಟಿ ನೀಡುವುದಕ್ಕೆ ತಯಾರಿ ನಡೆಸಿದೆ.
ಕೆಲವರು ಸ್ಥಳೀಯ ಶಾಸಕರನ್ನು ಬಿಟ್ಟು ಪ್ರಭಾವಿ ನಾಯಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರ ಮೂಲಕ ವರಿಷ್ಠರ ಮೇಲೆ ಪ್ರಭಾವ ಬೀರಿ ಟಿಕೆಟ್ ಗಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎರಡನೇ ಹಂತದ ನಾಯಕರ ಬೆನ್ನು ಹತ್ತಿರುವ ಹಲವರು ಬಿ-ಫಾರಂಗಾಗಿ ಪ್ರಯಾಸಪಡುತ್ತಿದ್ದಾರೆ. ನಾಯಕತ್ವವಿಲ್ಲದ ಕಾಂಗ್ರೆಸ್: ಕಾಂಗ್ರೆಸ್‌ನಲ್ಲಿ ಸ್ಥಳೀಯವಾಗಿ ಸಮರ್ಥ ನಾಯಕತ್ವವಿಲ್ಲ. ಈ ಹಿಂದೆ ಅಂಬರೀಶ್ ನಾಯಕತ್ವ ಜಿಲ್ಲೆಯಲ್ಲಿತ್ತು. ಕಳೆದ ಚುನಾವಣಾ ಸಮಯದಲ್ಲೇ ಅವರು ಚುನಾವಣೆಗೆ ನಿರುತ್ಸಾಹ ತೋರಿಸಿ ಹೋರಾಟದಿಂದ ಹಿಂದೆ ಸರಿದರು. ಅವರಿಗೀಗ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಆಸಕ್ತಿಯೂ ಇಲ್ಲ. ಪ್ರಚಾರಕ್ಕೆ ಬರುವ ಸಾಧ್ಯತೆಗಳೂ ತೀರಾ ಕಡಿಮೆ.
Related Articles
Advertisement
ಕಳೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಸ್ಥಾನಗಳಲ್ಲಿ ಜಯಗಳಿಸಿತ್ತು. ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಹೋರಾಟ ನಡೆಸಬೇಕಿದ್ದರೂ ಸಮರ್ಥ ಸಾರಥಿ ಇಲ್ಲದೆ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಅಷ್ಟಾಗಿ ಕಂಡುಬರುತ್ತಿಲ್ಲ.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಅಭಾವ: ಕಾಂಗ್ರೆಸ್ -ಜೆಡಿಎಸ್‌ಗೆ ಸಮರ್ಥ ಪೈಪೋಟಿ ನೀಡುವುದಕ್ಕೆ ಬಿಜೆಪಿ ಉತ್ಸಾಹವೇನೋ ತೋರುತ್ತಿದೆ. ಆದರೆ, ನಗರದ 35 ವಾರ್ಡ್‌ಗಳಿಂದ ಸ್ಪರ್ಧಿಸುವುದಕ್ಕೆ ಆ ಪಕ್ಷದಲ್ಲಿ ಅಭ್ಯರ್ಥಿಗಳ ಅಭಾವ ಎದುರಾಗಿದೆ. ಆದರೂ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್ ಈಗಾಗಲೇ ಕಾರ್ಯಕರ್ತರ ಪೂರ್ವ ಭಾವಿಸಭೆ ನಡೆಸಿ ಚುನಾವಣೆಗೆ ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ತಯಾರಿಯಲ್ಲಿದ್ದಾರೆ.ಚುನಾವಣಾ ಸಮಯದಲ್ಲಿ ಮಂಡ್ಯದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ ತೇಜಸ್ವಿನಿ ರಮೇಶ್ ಈಗ ವಿಧಾನಪರಿಷತ್ ಸದಸ್ಯೆಯಾಗಿದ್ದಾರೆ. ಆದರೂ, ಮಂಡ್ಯ ಕಡೆ ಮುಖ ಮಾಡುತ್ತಿಲ್ಲ. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಮರೆಯಾಗಿದ್ದಾರೆ. ಉಳಿದಂತೆ ಬಿಜೆಪಿ ನಾಯಕರು ಮಂಡ್ಯ ಕಡೆ ಬರುತ್ತಿಲ್ಲ. ಹೀಗಾಗಿ ನಗರಸಭೆ ಚುನಾವಣೆಗೆ ಬಿಜೆಪಿ ಪಾಳಯದೊಳಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಚುನಾವಣೆಯಲ್ಲಿ ಹತ್ತು ಮಂದಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿಯೂ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಎರಡೂ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಒಟ್ಟಾರೆ ಸ್ಥಳೀಯ ಸಂಸ್ಥೆ ಚುನಾವಣೆ ಕಣ ದಿನೇ ದಿನೆ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆ ದಿನದಿಂದ ಪ್ರಚಾರದ ಕಾವೇರಲಿದೆ.